Select Your Language

Notifications

webdunia
webdunia
webdunia
webdunia

ಭದ್ರತಾ ಲೋಪ: ಸಿಎಂ ಸಿದ್ದರಾಮಯ್ಯಗೆ ಶಾಲು ಹಾಕಲು ವೇದಿಕೆ ಏರಿದ ಯುವಕ ಅರೆಸ್ಟ್‌

ಭದ್ರತಾ ಲೋಪ: ಸಿಎಂ ಸಿದ್ದರಾಮಯ್ಯಗೆ ಶಾಲು ಹಾಕಲು ವೇದಿಕೆ ಏರಿದ ಯುವಕ ಅರೆಸ್ಟ್‌

Sampriya

ಬೆಂಗಳೂರು , ಭಾನುವಾರ, 15 ಸೆಪ್ಟಂಬರ್ 2024 (16:56 IST)
ಬೆಂಗಳೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯಗೆ ಶಾಲು ಹಾಕಲು ಯುವಕನೊಬ್ಬ ವೇದಿಕೆ ಹತ್ತಿದ ಘಟನೆ ಇಂದು ನಡೆದಿದೆ.

ಭದ್ರತಾ ಲೋಪದಿಂದಾಗಿ ಇದು ನಡೆದಿದ್ದು, ಕೂಲೇ ಪೊಲೀಸರು ಆತನನ್ನು ವಶಕಕ್ಕೆ ಪಡೆದಿದ್ದಾರೆ. ಇನ್ನೂ ಯುವಕನೊಬ್ಬ ಏಕಾಏಕಿ ವೇದಿಕೆ ಹತ್ತಿದ್ದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.  

ಕನ್ನಡ ಬಾವುಟದ ಶಾಲು ಧರಿಸಿದ್ದ ಯುವಕ, ಸಿದ್ದರಾಮಯ್ಯ ಅವರಿಗೆ ಶಾಲು ಹಾಕಲು ವೇದಿಕೆಯತ್ತ ತೆರಳಿದ್ದ, ಈ ವೇಳೆ ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ಶಾಲನ್ನು ಸಿದ್ದರಾಮಯ್ಯ ಅವರ ಕಡೆ ಎಸೆದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಕ್ರಮದ ವೇದಿಕೆಯಲ್ಲಿ ಸಿ.ಎಂ ಸಿದ್ದರಾಮಯ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಹೆಚ್​.ಸಿ.ಮಹದೇವಪ್ಪ, ದಿನೇಶ್ ಗುಂಡೂರಾವ್, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಯುವಕನೊಬ್ಬ ಏಕಾಏಕಿ ವೇದಿಕೆ ಮೇಲೆ ಜಿಗಿದು ಸಿದ್ದರಾಮಯ್ಯ ಅವರ ಕಡೆ ಧಾವಿಸಿ ಶಾಲು ಹೊದಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಆ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಯುವಕ ಕನಕಪುರ ಮೂಲದವನು ಎನ್ನಲಾಗಿದ್ದು, ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಗಮಂಗಲ ಗಲಭೆಯಲ್ಲಿ ಪಿಎಫ್‌ಐ, ಕೆಎಫ್‌ಡಿ ಕೈವಾಡ ಶಂಕೆ, ಎನ್‌ಐಎ ತನಿಖೆಗೆ ಆರ್‌. ಅಶೋಕ್ ಒತ್ತಾಯ