Publish Date: Sat, 20 May 2017 (14:46 IST)
Updated Date: Sat, 20 May 2017 (14:49 IST)
ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮಾತ್ರ ಇರುವುದಿಲ್ಲ. ಯಾವ ಭಾಷೆಯಲ್ಲಿ ನಾನು ಮಾತನಾಡಬೇಕು ಎನ್ನುವ ಬಗ್ಗೆ ನನಗೆ ಪಾಠ ಹೇಳ್ಬೇಡಿ ಎಂದು ಜಿಲ್ಲಾಧಿಕಾರಿ ಜಯರಾಂ ಎಂಇಎಸ್ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಷಾ ರಾಜಕಾರಣ ಮಾಡಿದ ಎಂಇಎಸ್ ಮುಖಂಡರಿಗೆ ತಾಕೀತು ಮಾಡಿದ ಜಿಲ್ಲಾಧಿಕಾರಿ ಜಯರಾಮ್, ನಾನು ಕರ್ನಾಟಕ ಸರಕಾರದ ಅಧಿಕಾರಿ. ಕರ್ನಾಟಕದ ಹಿತ ಕಾಪಾಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಭೆಯಲ್ಲಿ ಎದ್ದು ನಿಂತು ಮಾತನಾಡಿದ ಎಂಇಎಸ್ ಮುಖಂಡ ಕಿರಣ್ ಠಾಕೂರ್ ನಾವು ಕರ್ನಾಟಕಕ್ಕೆ ನೀರು ನೀಡುತ್ತಿದೆ ಎಂದಾಗ ನೀರು ಬಿಡುತ್ತಿರುವುದು ನೀವಲ್ಲ. ಮಹಾರಾಷ್ಟ್ರ ಸರಕಾರ ಎಂದು ತಿರುಗೇಟು ನೀಡಿದರು.
ಮೊದಲು ನಾವೆಲ್ಲಾ ಕರ್ನಾಟಕದವರು ನಂತರ ಭಾರತೀಯರು ಎನ್ನುವ ಭಾವನೆ ಎಲ್ಲರಲ್ಲಿ ಬರಬೇಕು ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ಮನವಿ ಮಾಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.