Select Your Language

Notifications

webdunia
webdunia
webdunia
webdunia

ಮಗುವಿನೊಂದಿಗೆ ರಾಕ್ಷಸತನ ಮೆರೆದು ಲೈಂಗಿಕ ಕ್ರಿಯೆ!?

ಮಗುವಿನೊಂದಿಗೆ ರಾಕ್ಷಸತನ ಮೆರೆದು ಲೈಂಗಿಕ ಕ್ರಿಯೆ!?
ಕಾರವಾರ , ಬುಧವಾರ, 30 ನವೆಂಬರ್ 2022 (08:11 IST)
ಕಾರವಾರ : ಪುಟ್ಟ ಗಂಡುಮಗುವಿನೊಂದಿಗೆ ರಾಕ್ಷಸತನ ಮೆರೆದು ಲೈಂಗಿಕ ಕ್ರಿಯೆ ನಡೆಸಿದ ಆರೋಪಿಗೆ ಕಾರವಾರದ ಪೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿದೆ.
 
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿಣಿ ಗ್ರಾಮದಲ್ಲಿ ಮೀನುಗಾರಿಕೆ ನಡೆಸುತಿದ್ದ ವನ್ನಳ್ಳಿಯ ಆರೋಪಿ ಖಾಸಿಂ (28) ಎಂಬಾತ ತಮ್ಮ ಪರಿಚಿತ ವ್ಯಕ್ತಿಯ 6 ವರ್ಷದ ಗಂಡುಮಗುವಿನ ಮೇಲೆ ದೈಹಿಕ ಸಂಭೋಗ ನಡೆಸಿ ರಾಕ್ಷಸತನ ಮೆರೆದಿದ್ದಾನೆ.

ಆಟವಾಡುತಿದ್ದ ಸಮಯದಲ್ಲಿ ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಮಗುವನ್ನು ಕರೆದೊಯ್ದು ಕೃತ್ಯ ಎಸಗಿದ್ದಾನೆ.  ಮಗುವು ರಕ್ತಸ್ರಾವದಿಂದ ಬಳಲುತ್ತಿರುವುದು ಕಂಡು ಕೃತ್ಯ ಬೆಳಕಿಗೆ ಬಂದಿದೆ.

ಕಾರವಾರದ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಪ್ರಕರಣದ ವಾದ-ವಿವಾದ ಆಲಿಸಿದ ನ್ಯಾಯಾಧೀಶರು ಆರೋಪಿ ಖಾಸಿಂಗೆ 20 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಇಂಡಿಯಾ ಜೊತೆ ವಿಸ್ತಾರಾ ವಿಲೀನ : ಹೂಡಿಕೆಗೆ ಟಾಟಾ ಚಿಂತನೆ