Publish Date: Mon, 05 Jun 2023 (08:53 IST)
Updated Date: Mon, 05 Jun 2023 (08:55 IST)
ಬೆಂಗಳೂರು : ರಾಜ್ಯದಲ್ಲಿ 11 ರಿಂದ ನಾರಿಯರಿಗೆ ಫ್ರೀ ಬಸ್ ಪ್ರಯಾಣ ಮಾಡಲು ಸರ್ಕಾರ ಅವಕಾಶ ನೀಡಿದೆ. ಹೀಗಾಗಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ನೌಕರರು ನಮಗೂ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ ಅಂತ ಬೇಡಿಕೆ ಇಟ್ಟಿದ್ದಾರೆ.
ರಾಜ್ಯದಲ್ಲಿ ಅಂದಾಜು ಹತ್ತು ಸಾವಿರ ನಿವೃತ್ತ ನೌಕರರು ಇದ್ದಾರೆ. ಜೂನ್ 11 ರಂದು ಫ್ರೀ ಬಸ್ ಸ್ಕೀಂ ಚಾಲನೆ ವೇಳೆ ನಾಲ್ಕು ನಿಗಮಗಳ ನಿವೃತ್ತಿ ಹೊಂದಿದ ನೌಕರರ ಪತಿ/,ಪತ್ನಿಗೆ ಉಚಿತ ಪ್ರಯಾಣ ಘೋಷಣೆಗೆ ಒತ್ತಾಯ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೆಎಸ್ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಮನವಿ ಮಾಡಿಕೊಂಡಿದೆ.