ಬೆಂಗಳೂರು: ದೆಹಲಿ ವಿಮಾನ ನಿಲ್ದಾಣ ಒಂದೇ ಒಂದು ಮಳೆಯನ್ನು ಎದುರಿಸಲಾಗದಷ್ಟು ನಿಶ್ಯಕ್ತವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಇಂದು ಮುಂಜಾನೆ ನಗರದಲ್ಲಿ ಸುರಿದ ಬಾರೀ ಮಳೆಗೆ ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿದು ಒಬ್ಬರು ಸಾವನ್ನಪ್ಪಿದರು. ಇನ್ನೂ ದುರ್ಘಟನೆಯಲ್ಲಿ ಹಲವು ಕಾರುಗಳು ಜಖಂಗೊಂಡಿದೆ.
ಈ ಬಗ್ಗೆ ಕಾಂಗ್ರೆಸ್ ಪೋಸ್ಟ್ ಹಂಚಿಕೊಂಡು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ. ದೆಹಲಿ ವಿಮಾನ ನಿಲ್ದಾಣ ಒಂದೇ ಒಂದು ಮಳೆಯನ್ನು ಎದುರಿಸಲಾಗದಷ್ಟು ನಿಶ್ಯಕ್ತವಾಗಿದೆ!
2024ರ ಮಾರ್ಚ್ ನಲ್ಲಿ ವಿಸ್ತರಿತ ಟರ್ಮಿನಲ್ ನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದರು, ಕೆಲವೇ ತಿಂಗಳಲ್ಲಿ ಈ ಟರ್ಮಿನಲ್ ಕುಸಿದು ಬಿದ್ದಿದೆ, ಒಂದು ಜೀವ ಹೋಗಿದೆ, ಹಲವರು ಗಾಯಗೊಂಡಿದ್ದಾರೆ.
Dear @BJP4Karnataka
,
ಇದೇನಾ ಸ್ಕಿಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಆತ್ಮನಿರ್ಬರ್ ಭಾರತ?
ಮೋದಿಯವರು ಹೇಳುವ ಉಡಾನ್ ಯೋಜನೆಯು ಹಣ ಉಡಾಯಿಸುವ ಯೋಜನೆಯಾಗಿದ್ದು ದುರಂತ.