ಜಿಂಕೆ ಬೇಟೆಯಾಡಿ ಮರಕ್ಕೆ ನೇತು ಹಾಕಿದ್ದ ದುಷ್ಕರ್ಮಿಗಳು ಗ್ರಾಮಸ್ಥರ ಕಂಡು ಪರಾರಿಯಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಜಿಂಕೆ ಕೊಂದು ಮರಕ್ಕೆ ನೇತು ಹಾಕಿ ಮಾಂಸ ಕತ್ತರಿಸುತ್ತಿದ್ದಾಗ ಗ್ರಾಮಸ್ಥರನ್ನು ನೋಡಿದ ಬೇಟೆಗಾರರು, ಜಿಂಕೆ ಮಾಂಸ ಬಿಟ್ಟು ಜೀಪ್ನಲ್ಲಿ ಪರಾರಿಯಾಗಲು ಮುಂದಾಗಿದ್ದಾರೆ. ಈ ವೇಳೆ ಜೀಪ್ ಪಲ್ಟಿಯಾಗಿದೆ. ಅಷ್ಟಾಗಿಯೂ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳೀಯರ ದೂರಿನ ಅನ್ವಯ ಸ್ಥಳಕ್ಕೆ ಕವಲಂದೆ ಪೊಲೀಸರು ಭೇಟಿ ನೀಡಿದ್ಧಾರೆ. ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಜಿಂಕೆ ಮಾಂಸ ಮತ್ತು ಜೀಪ್ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.