ಕಬಿನಿ, ಹಾರಂಗಿ, ಕೆಆರ್ಎಸ್, ಹೇಮಾವತಿ, ತುಂಗಾಭದ್ರಾ ಸೇರಿ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಬಗ್ಗೆ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ವಾತಾವರಣ ದಿನದಿಂದ ದಿನಕ್ಕೆ ಬದಲಾಗುತ್ತಿದೆ.
ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿದ್ದು, ಇದರಿಂದ ನದಿ, ಡ್ಯಾಂಗಳಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ತುಂಬಿ ನಿಂತಿದ್ದ ಡ್ಯಾಂಗಳ ಒಳಹರಿವಿನಲ್ಲಿ ಇಳಿಕೆಯಾಗಿದೆ. ಕೆಆರ್ಎಸ್ ಶೇ. 95, ತುಂಗಾಭದ್ರಾ ಶೇ. 82, ಕಬಿನಿ ಜಲಾಶಯದಲ್ಲಿ ಶೇ. 97, ಮಲಪ್ರಭಾ ಶೇ. 74, ಘಟಪ್ರಭಾ ಶೇ. 69, ಲಿಂಗನಮಕ್ಕಿ ಶೇ. 71, ಹಾರಂಗಿ ಶೇ. 87, ಆಲಮಟ್ಟಿ ಡ್ಯಾಂ ಶೇ. 82ರಷ್ಟು ಭರ್ತಿಯಾಗಿವೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಬಗ್ಗೆ ಮಾಹಿತಿ ಇಲ್ಲಿದೆ.