ಸಹಕಾರ ಸಂಘಗಳ ಮೇಲಿನ ಸರ್‌ಚಾರ್ಜ್ ಇಳಿಕೆ ಮಾಡಲಾಗಿದೆ.
ಬಜೆಟ್ ಮಂಡನೆಯಲ್ಲಿ ಈ ಬಗ್ಗೆ ನಿರ್ಮಲಾ ಸೀತಾರಾಮನ್ ಹೇಳಿದ್ದು, ಶೇ.12 ರಿಂದ ಶೇ.7 ಕ್ಕೆ ಸರ್‌ಚಾರ್ಜ್ ಇಳಿಕೆ ಮಾಡಲಾಗಿದೆ ಎಂದಿದ್ದಾರೆ. 10 ಕೋಟಿ ಒಳಗಿನ ಆದಾಯದ ಸಹಕಾರ ಸಂಘಗಳಿಗೆ ಇದು ಅನ್ವಯವಾಗಲಿದೆ.
ತೆರಿಗೆ ಪದ್ಧತಿಯಲ್ಲಿಯೂ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಆದಾಯ ತೆರಿಗೆ ಘೋಷಣೆ ಅಥವಾ ಆದಾಯ ತೆರಿಗೆ ಸಲ್ಲಿಕೆ ವೇಳೆ ಯಾವುದಾದರೂ ಆದಾಯ ಬಿಟ್ಟುಹೋಗಿದ್ದರೆ ಅದನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಸರಿಪಡಿಸಿಕೊಳ್ಳಲು ಎರಡು ವರ್ಷಗಳ ಅವಕಾಶ ಇದೆ.