Publish Date: Sun, 15 Oct 2017 (11:40 IST)
Updated Date: Sun, 15 Oct 2017 (11:42 IST)
ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಮೂರು ದಿನಗಳಿಂದ ಎಡೆಬಿಡದೆ ಸುರಿಯತ್ತಿರುವ ಮಳೆಗೆ ಜನ ತಲ್ಲಣಗೊಂಡಿದ್ದಾರೆ. ಮೂರು ದಿನಗಳ ಹಿಂದೆ ನೀರಿನಲ್ಲಿ ಕೊಚ್ಚಿ ಹೋದ ತಾಯಿ, ಮಗಳ ಪೈಕಿ ಒಬ್ಬರ ಶವ ಪತ್ತೆಯಾಗಿದೆ ಎನ್ನಲಾಗಿದೆ.
ಮೈಸೂರು ರಸ್ತೆ ಕುಂಬಳಗೋಡಿನ ಬಳಿ ಓರ್ವ ಮಹಿಳೆಯ ಶವ ಪತ್ತೆಯಾಗಿದ್ದು, ತಾಯಿ ಮತ್ತು ಮಗಳ ಪೈಕಿ ಓರ್ವಳ ಶವವಿರಬಹುದೆಂದು ಅಂದಾಜಿಲಾಗಿದೆ.
ತಾಯಿ ಮಗಳ ಶವಕ್ಕಾಗಿ ತೀವ್ರ ಶೋಧ ನಡೆಸಿರುವ ರಕ್ಷಣಾ ತಂಡ ಒಂದು ಶವ ಪತ್ತೆ ಮಾಡಿದೆ. ಆದರೆ ಇದು ಯಾರದ್ದು ಎಂದು ಇನ್ನೂ ಸ್ಪಷ್ಟವಾಗಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ