ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರ್ತಿದ್ದಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರು ಬ್ಯಾಕ್ ಟು ಬ್ಯಾಕ್ ಸಭೆಗಳ್ಳನ್ನು ನಡೆಸುತ್ತಿದ್ದಾರೆ... ಬಿಜೆಪಿ ಸರ್ಕಾರದಲ್ಲಿ ನಡೆದಂತ ಹಗರಣಗಳ ಬಗ್ಗೆ ಈಗಾಗಲೇ ಕೆಲ ಸಚಿವರು ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ... ಇದರ ಬೆನ್ನಲ್ಲೇ ಉಪ ಮುಖ್ಯ ಮಂತ್ರಿಯಾದ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುತಿದ್ದು, ಇನ್ನೂ ಜಲಸಂಪನ್ಮೂಲ ಸಚಿವರಾಗಿ ಇಂದು ವಿಕಾಸಸೌಧದಲ್ಲಿ ಎಲ್ಲಾ ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ರು....ಇನ್ನೂ ಸಭೆಯಲ್ಲಿ ಮೇಕೆದಾಟು, ಎತ್ತಿನಹೊಳೆ, ಮಹಾದಾಯಿ ಯೋಜನೆಗಳು ಹಾಗೂ ನೀರಾವರಿ ಯೋಜನೆ, ಯೋಜನೆಗಳ ಕಾರ್ಯಗತದ ಬಗ್ಗೆ ಚರ್ಚೆ ಮಾಡಿದ್ರು..ಪರಿಸರ ಇಲಾಖೆಯ ಅನುಮತಿ, ತಾಂತ್ರಿಕ ಅಡಚಣೆಗಳ ಬಗ್ಗೆ ವಿವಿಧ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚೆನಡೆಸಿದ್ರು....ಇನ್ನು ಸಭೆ ಆರಂಭಕ್ಕೂ ಮುನ್ನ ಅಧಿಕಾರಿಗಳಿಗೆ ಡಿಕೆ ಶಿವಕುಮಾರ್ ಖಡಕ್ ಸೂಚನೆ ಸಹ ನೀಡಿದ್ರು..ಯಾವುದೇ ವಿಡಿಯೋ ಮಾಡೋದು, ಅದನ್ನ ವೈರಲ್ ಮಾಡೋದು, ಇದನ್ನೆಲ್ಲಾ ಮಾಡಬೇಡಿ, ನನಗೆ ಎಲ್ಲಾ ಮಿಷನ್ ಫಂಕ್ಷನ್ ಗೊತ್ತಿದೆ.ಯಾರೇ ಆಗಿರಲಿ, ನನ್ನ ಟೀಂ ಆಗಿರಲಿ ಅಥವಾ ಅಧಿಕಾರಿಗಳಾಗಿರಲಿ ಯಾರೂ ಹೀಗೆ ಮಾಡಬೇಡಿಎಲ್ಲರ ಪೋನ್ ಆಫ್ ಮಾಡಿ ಸಿರಿಯಸ್ ಆಗಿರಿ ಅಂತ ಅಧಿಕಾರಿಗಳಿಗೆ ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಆವಾಜ್ ಹಾಕಿದ್ರು