ಡಿಸಿಎಂ ಲಕ್ಷ್ಮಣ ಸವದಿ ಆತ್ಮಹತ್ಯೆ ಮಾಡಿಕೊಳ್ಳೋದು ಬೇಡ ಅಂದೋರು ಯಾರು?

Webdunia
ಶನಿವಾರ, 5 ಅಕ್ಟೋಬರ್ 2019 (20:28 IST)
ಬೆಳೆಹಾನಿಯಿಂದ ರೈತರು ಕಂಗಾಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಏಕ ರೂಪದಲ್ಲಿ ಪರಿಹಾರ ನೀಡಬೇಕು. ಹೀಗಂತ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  

ಬೆಳಗಾವಿ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು. ಬೆಳೆ ಪರಿಹಾರವನ್ನು ಹೆಕ್ಟೇರ್ ಹೊರತುಪಡಿಸಿ ಎಕರೆ ರೂಪದಲ್ಲಿ ನೀಡಬೇಕು. ಈ ಮೊದಲು  ನಡೆದಿದ್ದ ಪ್ರತಿಭಟನೆಗಳ ಸಂದರ್ಭದಲ್ಲಿ ರೈತರ ಮೇಲೆ ದಾಖಲಿಸಿದ್ದ ಕೇಸ್ ಗಳನ್ನು ರದ್ದುಗೊಳಿಸುವಂತೆ ಒತ್ತಾಯ ಮಾಡಿದ್ರು.  

ನೆರೆ ಪರಿಹಾರದ ಚರ್ಚೆಗೆ  ಆಗಮಿಸಿದ್ದ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಎದುರಲ್ಲಿಯೇ ಡಿ.ಸಿ.ಎಂ ಲಕ್ಷ್ಮಣ ಸವದಿ ತಮಗೂ 80 ಲಕ್ಷ ನೆರೆ ಪರಿಹಾರ ಕೇಳಿದ್ದರು. ಅವರಿಗೆ ಸರಕಾರ  ಪರಿಹಾರ ನೀಡದಿದ್ದರೆ ಭಯ ಪಡಬೇಕಿಲ್ಲ. ರೈತರೆಲ್ಲರೂ ಸೇರಿ ಪರಿಹಾರ ನೀಡುತ್ತೇವೆ. ಹೀಗೆಂದು 180 ರೂಪಾಯಿ ಹಣ ಕೂಡಿಸಿ ಲಕ್ಷ್ಮಣ ಸವದಿ ಅವರಿಗೆ ಕಳಿಸಲು ರೈತರು ಮುಂದಾದರು.

ರೈತ ಮುಖಂಡ ಚುನಪ್ಪಾ ಪೂಜಾರಿ, ಬೆಳೆ ಪರಿಹಾರ ನೀಡುವಂತೆ ರೈತರು ಮುಖ್ಯಮಂತ್ರಿಗಳನ್ನು ಆಗ್ರಹಿಸಲು ಮುಂದಾದಾಗ ಪೊಲೀಸರು ಬಂಧಿಸಿದ್ದರು. ಪರಿಹಾರ ಸಿಗದಿದ್ದರೆ ಡಿಸಿಎಂ ಲಕ್ಷ್ಮಣ ಸವದಿ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಅಂತ ಟಾಂಗ್ ನೀಡಿದ್ರು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತಕ್ಕೆ ದೊಡ್ಡ ಹೊಡೆತ, ಟಿ20 ವಿಶ್ವಕಪ್‌ಗೆ ತಿಲಕ್ ವರ್ಮಾ ಆಡೋದು ದೌಟ್‌

ಅಂಕುಶ್‌ ಭಾರದ್ವಾಜ್‌ ಮೇಲೆ ಅಪ್ರಾಪ್ತ ಶೂಟರ್‌ನಿಂದ ಲೈಂಗಿಕ ಕಿರುಕುಳ, ಕೋಚ್‌ಗೆ ಬಿಗ್‌ಶಾಕ್‌

ಬಿಜೆಪಿ ಕಾರ್ಯಕರ್ತೆಯನ್ನು ಉಗ್ರರಂತೆ ಬಂಧಿಸಲಾಗಿದೆ: ಅರಗ ಜ್ಞಾನೇಂದ್ರ

ರಾಜ್ಯಕ್ಕೆ ಬಂದು ತನ್ನನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸಿ: ಶಾಗೆ ಮಮತಾ ಸವಾಲು

ಬಳ್ಳಾರಿ ಶೂಟೌಟ್ ಪ್ರಕರಣ, ಸಿಬಿಐಗೆ ವಹಿಸುವ ಬಗ್ಗೆ ಡಾ.ಜಿ.ಪರಮೇಶ್ವರ್ ಮಹತ್ವದ ಮಾಹಿತಿ

ಮುಂದಿನ ಸುದ್ದಿ
Show comments