Publish Date: Mon, 04 Nov 2019 (10:42 IST)
Updated Date: Mon, 04 Nov 2019 (10:46 IST)
ಬಾಗಲಕೋಟೆ : ಮಲಗಿದ್ದವನನ್ನ ಎಬ್ಬಿಸಿ ಮಂತ್ರಿ ಮಾಡಿ ಡಿಸಿಎಂ ಸ್ಥಾನ ಕೊಟ್ರು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಬಾಗಲಕೋಟೆಯ ರಬಕವಿ –ಬನಹಟ್ಟೆ ತಾಲೂಕಿನ ಹಳಿಂಗಳಿ ಭದ್ರಗಿರಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಮಂತ್ರಿ ಆಗಬೇಕೆಂದು ಆಸೆ ಪಟ್ಟಿರಲಿಲ್ಲ. ನಾನು ಮಂತ್ರಿ ಆಗುತ್ತೇನೆ ಎಂದು ನನಗೆ ಗೊತ್ತೇ ಇರಲಿಲ್ಲ. ಮಧ್ಯರಾತ್ರಿ 2 ಗಂಟೆಗೆ ಕರೆ ಮಾಡಿ ಎಬ್ಬಿಸಿ ಮಂತ್ರಿ ಮಾಡಿದ್ರು ಎಂದು ಹೇಳಿದ್ದಾರೆ.
ನನ್ನನ್ನು ಮಂತ್ರಿ ಮಾಡಿದ್ದಕ್ಕೆ ಆಶ್ಚರ್ಯವಾಗಿತ್ತು. ನನ್ನನ್ನು ಮಂತ್ರಿ ಮಾಡಿದ್ದಕ್ಕೆ ಹಲವರು ಪ್ರಶ್ನೆ ಮಾಡಿದ್ದರು. ಹರ ಮುನಿದರೂ ಗುರು ಕಾಯುವನು ಎಂದು ನಾನು ಹೇಳಿದ್ದೆ ಎಂದು ಅವರು ತಿಳಿಸಿದ್ದಾರೆ.