ಸ್ಪಷ್ಟನೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್‌ಗೆ ಮತ್ತೇ ಪ್ರಶ್ನೆ ಹಾಕಿದ ಬಯೋಕಾನ್ ಮುಖ್ಯಸ್ಥೆ

Sampriya
ಮಂಗಳವಾರ, 14 ಅಕ್ಟೋಬರ್ 2025 (22:17 IST)
ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿಗಳು ಮತ್ತು ಕಸದ ಸಮಸ್ಯೆ ವಿಚಾರವಾಗಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಮತ್ತೆ ಡಿಸಿಎಂ ಡಿಕೆಶಿ, ಸಿಎಂ ಸಿದ್ದರಾಮಯ್ಯ ಹಾಗೂ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನೆ ಮಾಡಿದ್ದಾರೆ.  

‘ಇತ್ತೀಚೆಗೆ ನಮ್ಮ ಬೆಂಗಳೂರಿನ ಬಯೋಕಾನ್‌ ಘಟಕಕ್ಕೆ ಚೀನಾದಿಂದ ವಿದೇಶಿ ಉದ್ಯಮಿಯೊಬ್ಬರು ಬಂದಿದ್ದರು. ಈ ಊರಿನಲ್ಲಿ ಇಷ್ಟೇಕೆ ರಸ್ತೆ ಗುಂಡಿಗಳು ಇವೆ, ಕಸ ಕಣ್ಣಿಗೆ ರಾಚುತ್ತೆ ಎಂದು ಪ್ರಶ್ನೆ ಮಾಡಿದ್ದರು.  ಆದರೆ, ಏಕೆ ಭಾರತ ಈ ಅವಕಾಶವನ್ನು ಬಳಸಿಕೊಳ್ಳುತ್ತಿಲ್ಲ ಎಂದರು’ ಎಂದು ಮೂವರನ್ನೂ ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ಪ್ರಶ್ನೆ ಮಾಡಿದ್ದರು.

ಇದಕ್ಕೆ ಉತ್ತರಿಸಿರುವ ಡಿಕೆಶಿ ಅವರು, ‘ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶ, ಗುರುತು, ಯಶಸ್ಸು ನೀಡಿದೆಯೇ ಹೊರತು ನಿರಂತರವಾಗಿ ತೆಗಳುವುದಕ್ಕಲ್ಲ ಎಂದು ಕಿರಣ್ ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು ಸವಾಲುಗಳಿವೆ. ಅವುಗಳೆಲ್ಲವನ್ನೂ ಆದ್ಯತೆಮೇರೆಗೆ ಬಗೆಹರಿಸುತ್ತಿದ್ದೇವೆ. ರಸ್ತೆ ಗುಂಡಿ, ಕಸದ ಸಮಸ್ಯೆಗಳನ್ನು ಕೊನೆಗಾಣಿಸುತ್ತೇವೆ‘ ಎಂದಿದ್ದಾರೆ.

‘ಬೆಂಗಳೂರು ಪೂರ್ವ ವಿಭಾಗದ ಪಾಲಿಕೆಯಲ್ಲಿ ₹1673 ಕೋಟಿ ಇದೆ. ಈ ಹಣದಿಂದ ಈ ಭಾಗದಲ್ಲಿ ಬರುವ ಐಟಿ ಬಿಟಿ ಕಾರಿಡಾರ್‌ಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಬೆಂಗಳೂರನ್ನು ತೆಗಳುವ ಬದಲು ಎಲ್ಲರೂ ಒಟ್ಟುಗೂಡಿ ಕೆಲಸ ಮಾಡೋಣ. ಜಗತ್ತು ಬೆಂಗಳೂರಿನ ಮೂಲಕ ಭಾರತವನ್ನು ನೋಡಲು ಬಯಸುತ್ತದೆ’ ಎಂದು

ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್ ಅವರು, ನಿಮ್ಮ ವಾದವನ್ನು ನಾನು ಒಪ್ಪುತ್ತೇನೆ. ಗುಣಮಟ್ಟ ಹಾಗೂ ತ್ವರಿತ ಎಂಬ ಎರಡು ನಿಯಮಗಳನ್ನು ಅಳವಡಿಸಿಕೊಂಡು ಸಾಂಘಿಕ ಪ್ರಯತ್ನವನ್ನು ಈ ನಿಟ್ಟಿನಲ್ಲಿ ನಾವೆಲ್ಲ ಮಾಡಬೇಕಿದೆ ಎಂದಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆತ್ಮಹತ್ಯೆಗೆ ಶರಣಾದ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಪ್ರಕರಣಕ್ಕೆ ಹೊಸ ಟ್ವಿಸ್ಟ್‌

ಸ್ಪಷ್ಟನೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್ ಮತ್ತೇ ಪ್ರಶ್ನೆ ಹಾಕಿದ ಬಯೋಕಾನ್ ಮುಖ್ಯಸ್ಥೆ

ಭಾಸ್ಕರ್ ರಾವ್ ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣ: ಅಲೋಕ್ ಕುಮಾರ್‌ಗೆ ಬಿಗ್‌ ರಿಲೀಫ್‌

ಭಾಗ್ಯವತಿ ಅಗ್ಗಿಮಠ ಸಾವು ಪ್ರಕರಣ: ಕಾಂಗ್ರೆಸ್‌ನ ಆರನೇ ಗ್ಯಾರಂಟಿ ಆತ್ಮಹತ್ಯೆ ಭಾಗ್ಯ

ಬಿಜೆಪಿ ಸರ್ಕಾರದಲ್ಲಿ ದಲಿತರು ಸುರಕ್ಷಿತವಲ್ಲ: ಪ್ರಿಯಾಂಕಾ ಗಾಂಧಿ ಕಿಡಿ

ಮುಂದಿನ ಸುದ್ದಿ
Show comments