Daily Horoscope

Select Your Language

Notifications

webdunia
webdunia
webdunia
webdunia

ವಿಜಯ್‌ಗೆ ಕರೆ ಮಾಡಿ ನಿಮ್ಮ ಜತೆ ನಾವಿದ್ದೇವೆಂದ ಡಿಕೆ ಶಿವಕುಮಾರ್‌, Video

DCM DK Shivkumar
Photo Credit X
ಬೆಂಗಳೂರು: ತಮಿಳುನಾಡಿನ ನೂತನ ಸಿಎಂ ಆಗಿರುವ ಜೋಸೆಫ್‌ ವಿಜಯ್‌ಗೆ ಡಿಸಿಎಂ ಡಿಕೆ ಶಿವಕುಮಾರ್ ಕರೆ ಮಾಡಿ ಶುಭಹಾರೈಸಿದ್ದಾರೆ. 

ಶುಭಾಶಯಗಳು ವಿಜಯ್‌, ನೀವು ಇತಿಹಾಸವನ್ನು ನಿರ್ಮಾಣ ಮಾಡಿದ್ದೀರಿ. 

ಇಬ್ಬರು ನಾಯಕರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. 

ದೂರವಾಣಿ ಕರೆಯಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, "ಅಭಿನಂದನೆಗಳು ವಿಜಯ್. ದೊಡ್ಡ ಇತಿಹಾಸ ಸೃಷ್ಟಿ ಮಾಡಿದರು. ನೀವು ಪಕ್ಷದಲ್ಲಿ ಎಲ್ಲರನ್ನೂ ಒಟ್ಟಿಗೆ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು. ಯುವಕರಲ್ಲಿ ಭಾವನೆಗಳು ಮತ್ತು ಆಕಾಂಕ್ಷೆಗಳು ಬಹಳ ಹೆಚ್ಚಾಗಿರುತ್ತವೆ. ಹೀಗಾಗಿ, ಅದು ಬಹಳ ಮುಖ್ಯವಾದ ವಿಚಾರ ಎಂದು ಅವರ ಜತೆ ಹಂಚಿಕೊಂಡರು.

ಈ ವೇಳೆ ವಿಜಯ್‌ಗೆ ಧೈರ್ಯ ತುಂಬಿದ ಡಿಕೆ ಶಿವಕುಮಾರ್‌, ನಾವೆಲ್ಲರೂ ಇದ್ದೇವೆ. ನಮ್ಮ ಪಕ್ಷದ ನಿಲುವಿನಂತೆ ನಿಮಗೆ ಏನೇ ಸಹಾಯ ಬೇಕಿದ್ದರೂ ಮಾಡಲು ಖಂಡಿತಾ ಪ್ರಯತ್ನಿಸುತ್ತೇವೆ. ನಿಮಗೆ ಒಳ್ಳೆಯದಾಗಲಿ, ನನ್ನ ಕಡೆಯಿಂದ ನಿಮಗೆ ಶುಭಾಶಯಗಳು ಎಂದು ಹೇಳಿದರು. 
https://www.youtube.com/shorts/lSWGDmvzieg?feature=share

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಾಂಕರ್‌ಗೆ ಗುದ್ದಿದ ಟ್ರಾಕ್ಟರ್: 6ಮಂದಿ ಸಾವು, ಹಲವು ಮಂದಿಗೆ ಗಂಭೀರ ಗಾಯ