Select Your Language

Notifications

webdunia
webdunia
webdunia
webdunia

ಡಿಸಿಎಂ ಡಿಕೆ ಶಿವಕುಮಾರ್ ದುರಹಂಕಾರದಲ್ಲಿ ಮೆರೆಯುತ್ತಿದ್ದಾರೆ, ಮೆರೆಯಲಿ- ಅಶ್ವಥ್ ನಾರಾಯಣ

ಡಿಸಿಎಂ ಡಿಕೆ ಶಿವಕುಮಾರ್ ದುರಹಂಕಾರದಲ್ಲಿ ಮೆರೆಯುತ್ತಿದ್ದಾರೆ, ಮೆರೆಯಲಿ- ಅಶ್ವಥ್ ನಾರಾಯಣ
bangalore , ಶುಕ್ರವಾರ, 6 ಅಕ್ಟೋಬರ್ 2023 (14:20 IST)
ಟನಲ್ ರಸ್ತೆ ವಿಚಾರದಲ್ಲಿ ವಿಪಕ್ಷದ ಸಲಹೆ ವಿಚಾರವಾಗಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.ಅಲ್ಲದೇ ಕೋಳಿ ಕೇಳಿ ಕಾರ ಮಸಾಲ ಅರೆಯಬೇಕಾ ಎಂದ ಡಿಸಿಎಂ ಹೇಳಿಕೆ ವಿಚಾರವಾಗಿ ಇಂತಹ ದುರಹಂಕಾರದ ಮಾತುಗಳು ಆಡ್ತಿದ್ದಾರೆ ಎಂದು ಡಿಕೆಶಿವಕುಮಾರ್ ಗೆ ಟಾಂಗ್ ನೀಡಿದ್ದಾರೆ.
 
ವಿಪಕ್ಷ ಸಹಕಾರ ಕೊಡ್ತಿಲ್ಲ ಅಂತಾರೆ.ದುರಹಂಕಾರದಲ್ಲಿ ಮೆರೆಯುತ್ತಿದ್ದಾರೆ, ಮೆರೆಯಲಿ.ಜನರೂ ಕೂಡ ಎಲ್ಲವನ್ನ ನೀಡ್ತಿದ್ದಾರೆ.ಒಳ್ಳೆಯ ಉದ್ದೇಶಕ್ಕೆ ಹೇಳ್ತೀವಿ, ನಮ್ಮ ಸ್ವಾರ್ಥಕ್ಕೆ ಹೇಳ್ತೀವಾ.?21ನೇ ಶತಮಾನದಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ಬೆಂಗಳೂರಿನಲ್ಲಿ ಆರ್ಥಿಕ ಪ್ರಗತಿ ಆಗಬೇಕಾದ್ರೆ.ಶಿಕ್ಷಣದಲ್ಲಿ ಸುಧಾರಣೆ ಆಗಬೇಕಾದ್ರೆ ಗುಣ ಮಟ್ಟದ ಸುಧಾರಣೆ ಆಗಬೇಕು.ಬೆಂಗಳೂರಿಗೆ ಹಣದ ಕೊರತೆ ಇದೆ.ಕೆಂದ್ರದಿಂದ ಹೆದ್ದಾರಿ, ಸಬ್ ಅರ್ಬನ್ ಎಲ್ಲಾ ಮಾಡಿಕೊಡ್ತಿದ್ದಾರೆ.ಬೆಂಗಳೂರಿನಲ್ಲಿ 65% ಟ್ಯಾಕ್ಸ್ ಉತ್ಪಾದನೆ ಆಗುತ್ತೆ.ಬೆಂಗಳೂರಿಗೆ ಕೊಡಲು ಏನು ಸಮಸ್ಯೆ ನಿಮಗೆ.ಇಂತಹ ಒಳ್ಳೊಳ್ಳೆಯ ಕಾರ್ಯ ಮಾಡಲು ನಿಮಗೇನು ಸಮಸ್ಯೆ.?ಶಿವರಾಮ ಕಾರಂತ ಬಡಾವಣೆಯಲ್ಲೇ ಸುತ್ತುತ್ತಿದ್ದಾರೆ.ಆದ್ರೆ ಇವರಿನ್ನೂ ಅರ್ಕಾವತಿ ಲೇಔಟ್‌ನಲ್ಲೇ ಸುತ್ತಾಡ್ತಿದ್ದಾರೆ.ಪ್ರತೀ ಆದಾಯ ಟ್ಯಾಕ್ಸ್, ಕರೆಂಟ್ ಬಿಲ್, ಪ್ರಾಪರ್ಟಿ ಟ್ಯಾಕ್ಸ್ ಹೆಚ್ಚು ಮಾಡ್ತಿದ್ದಾರೆ.ಬೆಂಗಳೂರು ಜನರ ಮೇಲೆ ಟ್ಯಾಕ್ಸ್ ಹಾಕ್ತಿದ್ದಾರೆ.ಹಾಗಾಗಿ ಈ ಸರ್ಕಾರ ಬೆಂಗಳೂರು ಜನ ವಿರೋಧಿ ಆಗಿದ್ದಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿಕೆ ವಿರುದ್ಧ ಮಜೊ ಸಚಿವ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರ ತಾತ್ಕಾಲಿಕ ಸ್ಥಗಿತ