Publish Date: Sat, 08 Jun 2019 (10:45 IST)
Updated Date: Sat, 08 Jun 2019 (10:47 IST)
ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಜನ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿದ ಸಿಟ್ಟು ಜೆಡಿಎಸ್ ನಾಯಕರಿಗೆ ಇನ್ನೂ ತಣ್ಣಗಾಗಿಲ್ಲ ಎನ್ನುವುದಕ್ಕೆ ಇದುವೇ ಸಾಕ್ಷಿ.
ಮಂಡ್ಯದ ಮದ್ದೂರಿನ ಗ್ರಾಮಸ್ಥರು ಸಚಿವ ಡಿಸಿ ತಮ್ಮಣ್ಣ ಬಳಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಮಾಡಿಕೊಡುವಂತೆ ಕೇಳಿದ್ದಕ್ಕೆ ಸಚಿವರು ಗ್ರಾಮಸ್ಥರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮತ ಹಾಕಲಿಕ್ಕೆ ಅವರು, ಅಭಿವೃದ್ಧಿಗೆ ಮಾತ್ರ ನಾವು ಬೇಕಾ ಎಂದು ಸಚಿವರು ಗ್ರಾಮಸ್ಥರನ್ನು ಜೆಡಿಎಸ್ ಗೆ ಲೋಕಸಭೆ ಚುನಾವಣೆಯಲ್ಲಿ ಮತ ಹಾಕದ್ದನ್ನೇ ಪ್ರಸ್ತಾಪಿಸಿ ಸಿಟ್ಟು ಹೊರ ಹಾಕಿದ್ದಾರೆ.
ಕೆಲವು ದಿನಗಳ ಮೊದಲು ಸಿಎಂ ಕುಮಾರಸ್ವಾಮಿ ಕೂಡಾ ಇದೇ ರೀತಿ ಮಾತು ಹೇಳಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದವರ ಕೆಂಗಣ್ಣಿಗೆ ಗುರಿಯಾಗಿದ್ದರು.