Select Your Language

Notifications

webdunia
webdunia
webdunia
webdunia

ಲೋಕಸಭಾ ಚುನಾವಣೆಗೆ ಸಕಲ ಸಿದ್ಧ ಎಂದ ಡಿಸಿ

ಲೋಕಸಭಾ ಚುನಾವಣೆಗೆ ಸಕಲ ಸಿದ್ಧ ಎಂದ ಡಿಸಿ
ರಾಯಚೂರು , ಮಂಗಳವಾರ, 12 ಮಾರ್ಚ್ 2019 (14:13 IST)
ಲೋಕಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಸಿದ್ಧತೆ ಕೈಗೊಂಡಿದ್ದು, ಶಾಂತಿಯುತ, ನಿರ್ಭೀತಿಯಿಂದ ಮತದಾನ ನಡೆಯಲು ಸಕಲ ವ್ಯವಸ್ಯೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ರಾಯಚೂರು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿ ಶರತ್ ಬಿ., ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 93,975 ಪುರುಷ ಮತದಾರರು, 95,345 ಮಹಿಳಾ ಮತದಾರರು ಹಾಗೂ ಇತರೆ 367 ಜನ ಮತದಾರಿದ್ದು ಒಟ್ಟು 18,93576 ಮತದಾರರಿದ್ದಾರೆ.

ಈ ಕ್ಷೇತ್ರದಲ್ಲಿ ಒಟ್ಟು 2,184 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಪ್ರತಿ ಮತಗಟ್ಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ. ಲೋಕಸಭಾ ಕ್ಷೇತ್ರದಲ್ಲಿ ಒರ್ವ ಆರ್ ಒ ಅಧಿಕಾರಿಗಳನ್ನು ನೇಮಿಸಲಾಗಿದೆ. ಮತದಾನಕ್ಕೆ ಇ ವಿ ಎಂ, ವಿ ವಿ ಪ್ಯಾಟ್, ಕಂಟ್ರೋಲ್ ಯುನಿಟ್ ಅಗತ್ಯ ಇರುವಷ್ಟು ಲಭ್ಯವಿದೆ ಎಂದು ಹೇಳಿದರು.

ಮದ್ಯ ಸಾಗಣೆಗೆ ತಡೆಯಲು ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ ಗಡಿ ಭಾಗದಲ್ಲಿ 7 ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಈಗಾಗಲೇ ಕ್ಷೇತ್ರದಲ್ಲಿ ಒಟ್ಟು 31 ಚೆಕ್ ಪೋಸ್ಟ್ ಅಳವಡಿಸಲಾಗುತ್ತಿದೆ ಎಂದರು.  




Share this Story:

Follow Webdunia kannada

ಮುಂದಿನ ಸುದ್ದಿ

ಹಾಸನ ಟಿಕೆಟ್ ಪ್ರಜ್ವಲ್ ಹೆಗಲಿಗಿಟ್ಟ ದೇವೇಗೌಡರು