Publish Date: Mon, 30 Dec 2019 (20:11 IST)
Updated Date: Mon, 30 Dec 2019 (20:13 IST)
ಟೋಲ್ ವಿರೋಧಿಸಿ ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಯಿಂದ ಹಗಲು ದರೋಡೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಕುಂದಗೋಳ -ಶೇರೆವಾಡ ನಡುವೆ ಟೋಲ್ ವಿರೋಧಿಸಿ ಕುಂದಗೋಳ ಬಂದ್ ಹಿನ್ನಲೆಯಲ್ಲಿ
ಲಕ್ಷ್ಮೆಶ್ವರದಿಂದ ಹುಬ್ಬಳ್ಳಿಗೆ ಹೋಗುವ ಬಸ್ ಸಂಚಾರದಲ್ಲಿ ಏಕಾಏಕಿ ಬಸ್ ದರ ಏರಿಸಿ ಹಗಲು ದರೋಡೆ ನಡೆದಿದೆ ಅಂತ ಟೀಕಿಸಲಾಗಿದೆ.
ಲಕ್ಷ್ಮೇಶ್ವರದಿಂದ ಹುಬ್ಬಳ್ಳಿಗೆ ಸಾಮಾನ್ಯವಾಗಿ 51 ರೂ. ಬಸ್ ದರ ಇದೆ. ಆದರೆ KA42 F 767 ನಂಬರಿನ ಬಸ್ ನಲ್ಲಿ ಬಸ್ ಕಂಡಕ್ಟರ್ 64 ರೂ. ಟಿಕೆಟ್ ನಿಗದಿಮಾಡಿ ಟಿಕೆಟ್ ಕೊಟ್ಟಿರುವ ಘಟನೆ ನಡೆದಿದೆ.
ಚಾಲಕನ ಈ ನಡೆಗೆ ಸಾವರ್ಜನಿಕರು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.