ಬೆಂಗಳೂರು ಸಿಟಿಗೆ ನೂತನ ಕಮಿಷನರ್ ಆಗಿ ದಯಾನಂದ ಅಧಿಕಾರ ಸ್ವೀಕಾರ
bangalore , ಬುಧವಾರ, 31 ಮೇ 2023 (20:00 IST)
ಬೆಂಗಳೂರು ಸಿಟಿಗೆ ನೂತನ ಕಮೀಷನರ್ ಆಗಿ ದಯಾನಂದ ಅಧಿಕಾರ ಸ್ವೀಕರಿಸಿದ್ರು. ನಿರ್ಗಮಿತ ಕಮೀಷನರ್ ಪ್ರತಾಪ್ ರೆಡ್ಡಿ ಅವರಿಂದ ಬ್ಯಾಟನ್ ಪಡೆದು ಅಧಿಕಾರ ವಹಿಸಿಕೊಂಡರು.ನಂತರ ಮಾತನಾಡಿದ ನಾನು ಕೂಡ ಬೆಂಗಳೂರಿನ ಮಗ ಈ ಇಲಾಖೆಯಲ್ಲಿ ಅನೇಕ ಹಿರಿಯ ಅಧಿಕಾರಿಗಳಾದ ಕಮಲ್ ಪಂತ್, ಪ್ರತಾಪ್ ರೆಡ್ಡಿ ಸೇರಿ ಹಲವಾರು ಮಂದಿ ಕೆಲಸ ಮಾಡಿದ್ದಾರೆ, ಎಲ್ಲಾರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ಕೊಡುವ ಬಗ್ಗೆ ಚಿಂತನೆ ಮಾಡುತ್ತೇನೆ ಇನ್ನೂ ನನ್ನ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿ ಕೊಟ್ಟ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಕೃತಜ್ಞತೆ ಗಳನ್ನ ಸಲ್ಲಿಸುತ್ತೇನೆ . ಇಂಟಲಿಜೆನ್ಸ್ ಪೊಲೀಸ್ ಇಲಾಖೆಯ ಒಂದು ಭಾಗ ಇಲ್ಲಿ ಸಾಕಷ್ಟು ಸುಧಾರಣೆ ಆಗಬೇಕು, ಸೈಬರ್ ಕ್ರೈಂ ತಡೆಗಟ್ಟಲು ನುರಿತ ತಂತ್ರಜ್ಞರನ್ನ ನೇಮಿಸಿಲಾಗುವುದು ಅಲ್ಲದೆ ಸಿಟಿಯಲ್ಲಿ ರೌಡಿಗಳ ಚಟುವಟಿಕೆಗಳನ್ನು ಮಟ್ಟಹಾಕುತ್ತೇವೆ , ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ರೌಡಿ ಅಸಾಮಿಗಳನ್ನ ಬಿಡೊದಿಲ್ಲ ಜತೆಗೆ ಬೆಂಗಳೂರು ನಗರಕ್ಕೆ ಟ್ರಾಫಿಕ್ ಸಮಸ್ಯೆ ಕೂಡ ದೊಡ್ಡದು ನಾನು ಕೂಡ ಟ್ರಾಫಿಕ್ ಅಡಿಷನಲ್ ಕಮೀಷನರ್ ಆಗಿ ಕೆಲಸ ಮಾಡಿದ್ದೇನೆ ಇದಕ್ಕೆ ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ಮಾಡುತ್ತೇವೆಂದು ಹೇಳಿದ್ರು.
ಮುಂದಿನ ಸುದ್ದಿ