ಕೋವಿಡ್ ಎರಡನೇ ಅಲೆ ಸೃಷ್ಠಿಸಿದ್ದ ತಲ್ಲಣದಿಂದ ಭಾರತ ಇನ್ನೂ ಚೇತರಿಸಿಕೊಳ್ಳುತ್ತಿದೆ. ದೇಶದೆಲ್ಲೆಡೆ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 8,865 ಕೋವಿಡ್ ಹೊಸ ಪ್ರಕರಣಗಳು ದಾಖಲಾಗಿವೆ. ಇದು 287 ದಿನಗಳಲ್ಲಿಯೇ ದಾಖಲಾದ ಅತೀ ಕಡಿಮೆ ಪ್ರಕರಣಗಳಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ನವೀಕರಿಸಿದ ಮಾಹಿತಿಯ ಪ್ರಕಾರ, ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 1,30,493 ಆಗಿದೆ. 2020ರ ಮಾರ್ಚ್‌ನಿಂದ ಈವರೆಗಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯು 0.38 ರಷ್ಟು ಕಡಿಮೆಯಾಗಿದೆ.
ಕೋವಿಡ್ ಸೋಂಕಿನ ಪ್ರಕರಣಗಳು ಕಳೆದ 39 ದಿನಗಳಿಂದ 20,000 ಕ್ಕಿಂತ ಕಡಿಮೆಯಾಗಿದ್ದು, ಕಳೆದ 142 ದಿನಗಳಿಂದ ದೈನಂದಿನ ಪ್ರಕರಣಗಳು 50,000ಕ್ಕಿಂತಲೂ ಕಡಿಮೆ ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 11,971 ಜನರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣವು ಪ್ರಸ್ತುತ 98.27ರಷ್ಟಿದೆ.