ಮನೆ ಮಂದಿಗೆ ವಿಷ ಹಾಕಿ ರೇಪ್ ಮಾಡಿದ್ದ ಲವರ್ ಜೊತೆ ಓಡಿಹೋದ ಮಗಳು

ಗುರುವಾರ, 12 ಸೆಪ್ಟಂಬರ್ 2019 (16:25 IST)
ಹುಚ್ಚು ಪ್ರೀತಿಯಲ್ಲಿ ಬಿದ್ದಿರೋ ಅಪ್ರಾಪ್ತ ಹುಡುಗಿಯೊಬ್ಬಳು ತನ್ನ ಲವ್ ಗಾಗಿ ಮಾಡಬಾರದ ಕೆಲಸ ಮಾಡಿ ಪರಾರಿಯಾಗಿದ್ದಾಳೆ.

ಜೈಲಿಗೆ ಹೋಗಿ ಬಂದಿದ್ದ ಯುವಕನೊಬ್ಬನ ಪ್ರೀತಿಯಲ್ಲಿ ಬಾಲಕಿ ಬಿದ್ದಿದ್ದಳು. ಅಷ್ಟೇ ಅಲ್ಲ, ಆತನಿಂದಲೇ ಅತ್ಯಾಚಾರಕ್ಕೂ ಒಳಗಾಗಿದ್ದಳು ಎನ್ನಲಾಗುತ್ತಿದೆ.

ರೇಪ್ ಮಾಡಿದವನನ್ನೇ ಪ್ರೀತಿಸಲು ಶುರುಮಾಡಿದ ಹುಡುಗಿಗೆ ಮನೆ ಮಂದಿ ಲವ್ ಗೆ ಬ್ರೇಕ್ ಹಾಕಿದ್ದಾರೆ.

ಇದರಿಂದ ರೊಚ್ಚಿಗೆದ್ದ ಬಾಲಕಿ ತನ್ನ ಮನೆ ಮಂದಿಗೆ ಊಟದಲ್ಲಿ ವಿಷ ಹಾಕಿ ಲವರ್ ಜತೆ ಪರಾರಿಯಾಗಿದ್ದಾಳೆ.

ಕಡಿಮೆ ಪ್ರಮಾಣದ ವಿಷ ಇದ್ದ ಕಾರಣ ಕುಟುಂಬದ ಸದಸ್ಯರು ಬದುಕಿ ಉಳಿದಿದ್ದಾರೆ. ಉತ್ತರ ಪ್ರದೇಶದ ಮೋರದಾಬಾದ್ ನಲ್ಲಿ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿ ವಿರುದ್ಧ ಆಕೆಯ ತಂದೆ ದೂರು ದಾಖಲು ಮಾಡಿದ್ದಾನೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನೆಲದಲ್ಲೇ ಕುಳಿತ ಆರೋಗ್ಯ ಸಚಿವ ಬಿ.ಶ್ರೀರಾಮುಲು