Select Your Language

Notifications

webdunia
webdunia
webdunia
webdunia

ಪಾತ್ರೆ ತೊಳೆದಿಲ್ಲವೆಂದು ಬೈದಿದ್ದಕ್ಕೆ ಅಮ್ಮನನ್ನೇ ಬಾಣಲೆಯಿಂದ ಹೊಡೆದು ಕೊಂದ ಮಗಳು!

ಪಾತ್ರೆ ತೊಳೆದಿಲ್ಲವೆಂದು ಬೈದಿದ್ದಕ್ಕೆ ಅಮ್ಮನನ್ನೇ ಬಾಣಲೆಯಿಂದ ಹೊಡೆದು ಕೊಂದ ಮಗಳು!
bangalore , ಬುಧವಾರ, 23 ಫೆಬ್ರವರಿ 2022 (19:56 IST)
ತಲೆಗೆ ಗಾಯಗಳೂ ಆಗಿತ್ತು. ನೆರೆಹೊರೆಯವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಆ ಮಹಿಳೆ ಸಾವನ್ನಪ್ಪಿದ್ದರು.ಕೆಲವೊಮ್ಮೆ ಕ್ಷುಲ್ಲಕ ಕಾರಣಗಳೇ ಕೊಲೆಗೆ ಪ್ರೇರೇಪಿಸುತ್ತದೆ. ಮನೆಯೆಂದ ಮೇಲೆ ಅಪ್ಪ-ಅಮ್ಮ-ಮಕ್ಕಳ ನಡುವೆ ಸಣ್ಣ ಪುಟ್ಟ ಜಗಳಗಳು ನಡೆಯುವುದು ಸಾಮಾನ್ಯ. ಆದರೆ, ಪಾತ್ರೆ ತೊಳೆಯಲು ಹೇಳಿದ ಕಾರಣಕ್ಕೆ 14 ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಗೆ ಬಾಣಲೆಯಿಂದ ಹೊಡೆದು ಕೊಂದಿರುವ ಅಮಾನವೀಯ ಘಟನೆ ನೊಯ್ಡಾದಲ್ಲಿ (Noida Crime) ನಡೆದಿದೆ. ಆ ಬಾಲಕಿಯ ವಿರುದ್ಧ ಸೆಕ್ಷನ್ 304ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಆಕೆಯನ್ನು ಸುಧಾರಣಾ ಗೃಹಕ್ಕೆ (ಕರೆಕ್ಷನಲ್ ಹೋಮ್) ಕಳುಹಿಸಲಾಗಿದೆ ಎಂದು ನೊಯ್ಡಾ ಪೊಲೀಸರು ಮಾಹಿತಿ ನೀಡಿದ್ದಾರೆ.
 
ಭಾನುವಾರ ರಾತ್ರಿ ಆ ಬಾಲಕಿ ತನ್ನ ತಾಯಿಗೆ ಗಾಯವಾಗಿದೆ ಎಂದು ಹೇಳಿ ತನ್ನ ಮನೆಯ ನೆರೆಹೊರೆಯವರನ್ನು ನೋಯ್ಡಾದ ಸೆಕ್ಟರ್ 77ನಲ್ಲಿರುವ ತನ್ನ 14ನೇ ಮಹಡಿಯ ಅಪಾರ್ಟ್‌ಮೆಂಟ್‌ಗೆ ಕರೆದಿದ್ದಳು. ಅಕ್ಕಪಕ್ಕದವರು ಬಂದು ನೋಡಿದಾಗ ಆ ಮಹಿಳೆಯ ದೇಹ ರಕ್ತಸಿಕ್ತವಾಗಿ ಬಿದ್ದಿತ್ತು. ಆಕೆಯ ತಲೆಗೆ ಗಾಯಗಳೂ ಆಗಿತ್ತು. ನೆರೆಹೊರೆಯವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಆ ಮಹಿಳೆ ಸಾವನ್ನಪ್ಪಿದ್ದರು.ಕೆಲವೊಮ್ಮೆ ಕ್ಷುಲ್ಲಕ ಕಾರಣಗಳೇ ಕೊಲೆಗೆ ಪ್ರೇರೇಪಿಸುತ್ತದೆ. ಮನೆಯೆಂದ ಮೇಲೆ ಅಪ್ಪ-ಅಮ್ಮ-ಮಕ್ಕಳ ನಡುವೆ ಸಣ್ಣ ಪುಟ್ಟ ಜಗಳಗಳು ನಡೆಯುವುದು ಸಾಮಾನ್ಯ. ಆದರೆ, ಪಾತ್ರೆ ತೊಳೆಯಲು ಹೇಳಿದ ಕಾರಣಕ್ಕೆ 14 ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಗೆ ಬಾಣಲೆಯಿಂದ ಹೊಡೆದು ಕೊಂದಿರುವ ಅಮಾನವೀಯ ಘಟನೆ ನೊಯ್ಡಾದಲ್ಲಿ (Noida Crime) ನಡೆದಿದೆ. ಆ ಬಾಲಕಿಯ ವಿರುದ್ಧ ಸೆಕ್ಷನ್ 304ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಆಕೆಯನ್ನು ಸುಧಾರಣಾ ಗೃಹಕ್ಕೆ (ಕರೆಕ್ಷನಲ್ ಹೋಮ್) ಕಳುಹಿಸಲಾಗಿದೆ ಎಂದು ನೊಯ್ಡಾ ಪೊಲೀಸರು ಮಾಹಿತಿ ನೀಡಿದ್ದಾರೆ.
 
ಭಾನುವಾರ ರಾತ್ರಿ ಆ ಬಾಲಕಿ ತನ್ನ ತಾಯಿಗೆ ಗಾಯವಾಗಿದೆ ಎಂದು ಹೇಳಿ ತನ್ನ ಮನೆಯ ನೆರೆಹೊರೆಯವರನ್ನು ನೋಯ್ಡಾದ ಸೆಕ್ಟರ್ 77ನಲ್ಲಿರುವ ತನ್ನ 14ನೇ ಮಹಡಿಯ ಅಪಾರ್ಟ್‌ಮೆಂಟ್‌ಗೆ ಕರೆದಿದ್ದಳು. ಅಕ್ಕಪಕ್ಕದವರು ಬಂದು ನೋಡಿದಾಗ ಆ ಮಹಿಳೆಯ ದೇಹ ರಕ್ತಸಿಕ್ತವಾಗಿ ಬಿದ್ದಿತ್ತು. ಆಕೆಯ ತಲೆಗೆ ಗಾಯಗಳೂ ಆಗಿತ್ತು. ನೆರೆಹೊರೆಯವರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಆ ಮಹಿಳೆ ಸಾವನ್ನಪ್ಪಿದ್ದರು.
 
 
ಸುಮಾರು 35-36 ವರ್ಷದ ಆ ಮಹಿಳೆಯ ಸಾವು ಅನುಮಾನಾಸ್ಪದ ಎಂದು ಪೊಲೀಸರಿಗೆ ಅನುಮಾನ ಉಂಟಾಗಿತ್ತು. ಆಕೆ ಗ್ರೇಟರ್ ನೋಯ್ಡಾದ ಸಂಸ್ಥೆಯೊಂದರಲ್ಲಿ ಸಪ್ಲೈ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆಕೆ ಅಪಾರ್ಟ್​​ಮೆಂಟ್​ನಲ್ಲಿ ತನ್ನ ಮಗಳೊಂದಿಗೆ ವಾಸಿಸುತ್ತಿದ್ದರು. ಆಕೆ ಮದುವೆಯಾದ ಐದು ವರ್ಷಗಳಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
 
ಹಿರಿಯ ಪೊಲೀಸ್ ಅಧಿಕಾರಿ ರಣವಿಜಯ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, “ಆ ಮಹಿಳೆ ತನ್ನ ಮಗಳಿಗೆ ಪಾತ್ರೆಗಳನ್ನು ತೊಳೆಯಲು ಹೇಳಿದ್ದಳು. ಆದರೆ, ಆಕೆ ಪಾತ್ರೆ ತೊಳೆಯಲು ಒಪ್ಪಿರಲಿಲ್ಲ. ಇದರಿಂದ ಆಕೆ ತನ್ನ ಮಗಳಿಗೆ ಜೋರಾಗಿ ಬೈದಿದ್ದಳು. ಇದೇ ಕಾರಣಕ್ಕೆ ಅಮ್ಮ-ಮಗಳ ನಡುವೆ ದೊಡ್ಡ ಜಗಳವೇ ನಡೆದಿತ್ತು. ಅಮ್ಮ ತನಗೆ ಬೈದಿದ್ದರಿಂದ ಕೋಪಗೊಂಡ ಮಗಳು ತನ್ನ ತಾಯಿಯ ತಲೆಗೆ ಬಾಣಲೆಯಿಂದ ಹೊಡೆದಿದ್ದಾಳೆ. ಮೂರ್ನಾಲ್ಕು ಬಾರಿ ಬಾಣಲೆಯಿಂದ ಆಕೆಯ ತಲೆಗೆ ಹೊಡೆದಿದ್ದಕ್ಕೆ ತೀವ್ರ ರಕ್ತ ಸೋರಿ ಆಕೆ ಕೆಳಗೆ ಬಿದ್ದಳು. ಅಮ್ಮನ ತಲೆಯಿಂದ ರಕ್ತ ಸುರಿಯುತ್ತಿರುವುದರಿಂದ ಭಯಗೊಂಡ ಆ ಬಾಲಕಿ ಗಾಬರಿಗೊಂಡು, ತಾನು ಆಗಷ್ಟೇ ವಾಕಿಂಗ್​ನಿಂದ ಬಂದಿದ್ದಾಗಿಯೂ, ಅಷ್ಟರಲ್ಲಿ ಅಮ್ಮ ಗಾಯಗೊಂಡು ಕೆಳಗೆ ಬಿದ್ದಿದ್ದಾಗಿಯೂ ಪಕ್ಕದ ಮನೆಯವರಿಗೆ ಹೇಳಿ ಅವರನ್ನು ಕರೆಸಿಕೊಂಡಿದ್ದಳು.
 
ಆದರೆ, ಪೊಲೀಸರು ಅಕ್ಕಪಕ್ಕದವರನ್ನು ವಿಚಾರಿಸಿದಾಗ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದಾಗ, ಯಾವುದೇ ಹೊರಗಿನವರು ಫ್ಲಾಟ್‌ಗೆ ಪ್ರವೇಶಿಸಿ ಆ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ಸುಳಿವು ಸಿಕ್ಕಿರಲಿಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ, ಆ 14 ವರ್ಷದ ಬಾಲಕಿ ತನ್ನ ತಾಯಿಯನ್ನು ಹೊಡೆದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕೊಲೆಗೆ ಬಳಸಿದ ಬಾಣಲೆಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ತಿಂಗಳು ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಪುನರಾರಂಭ