Select Your Language

Notifications

webdunia
webdunia
webdunia
webdunia

ಲಾಲಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಡೇಟ್ ಫಿಕ್ಸ್

ಲಾಲಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಡೇಟ್ ಫಿಕ್ಸ್
bangalore , ಶುಕ್ರವಾರ, 28 ಜುಲೈ 2023 (18:54 IST)
ಸ್ವಾತಂತ್ರ್ಯ ದಿನೋತ್ಸವ ಹತ್ತಿರ ಬರುತ್ತಿದೆ. ಪ್ರತಿ ಬಾರಿಯು ಡಿಫರೇಂಟ್ ಥೀಮ್ ನೋಂದಿಗೆ ಲಾಲ್‌ಬಾಗ್‌ ನಲ್ಲಿ ಫ್ಲವರ್‌ ಶೋ ಆಯೋಜನೆ ಮಾಡಲಾಗುತ್ತೆ. ಈ ಬಾರಿಯ ಫ್ಲವರ್‌ ಶೋ ಹೇಗಿರಬಹುದೆಂಬ ಕುತೂಹಲವು ಹೆಚ್ಚಾಗಿದೆ. ಇದೇ ಆಗಸ್ಟ್ 4 ರಿಂದ ಫ್ಲವರ್ ಶೋ ಆರಂಭವಾಗಲಿದೆ. ಸ್ವಾತಂತ್ರೋತ್ಸವದ ಅಂಗವಾಗಿ ಈ ಬಾರಿ 214 ನೇ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ವೆರಾಯಿಟಿ ಪ್ಲಾವರ್ಸ್ ಗಳು ರೆಡಿಯಾಗಿದ್ದು, ಈ ಬಾರಿ ವಿಧಾನ ಸೌಧ ಹಾಗೂ ಕೆಂಗಲ್ ಹನುಮಂತಯ್ಯ ಅವರ ಕಾನ್ಸೆಪ್ಟ್ ಇರಲಿದೆ. ಇನ್ನು 76ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ 15 ರಿಂದ 17 ಲಕ್ಷ ಹೂ ಬಳಕೆ ಸಾಧ್ಯತೆಯಿದೆ. ಫ್ಲವರ್ ಶೋಗೆ ಕೊಲ್ಕತ್ತಾ, ಕೇರಳ, ಆಂಧ್ರದ ಹೂಗಳ ಬಳಕೆಯಾಗಲಿದೆ. 10 ರಿಂದ 12 ಲಕ್ಷ ಜನ ಬರುವ ಸಾಧ್ಯತೆಯಿದ್ದು, ಒಟ್ಟು 10 ದಿನಗಳ ಕಾಲ ಪ್ಲವರ್ ಶೋ ನಡೆಯಲಿದೆ. ಪ್ರದರ್ಶನಕ್ಕೆ 10 ಲಕ್ಷಕ್ಕೂ ಅಧಿಕ ಜನ ಬರುವ ನಿರೀಕ್ಷೆಯಿದ್ದು, ಸುಮಾರು 2 ಕೋಟಿ ವೆಚ್ಚದಲ್ಲಿ ರೆಡಿಯಾಗುತ್ತಿದೆ. ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಫ್ಲವರ್‌ ಶೋನಲ್ಲಿ ವಿಧಾನಸೌಧದ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಹೂವಿನ ಸ್ಟ್ಯಾಚ್ಯು ಅಟ್ರ್ಯಾಕ್ಟ್ ಮಾಡಲಿದೆ. ವಿಧಾನಸೌಧ ನಿರ್ಮಾಣ ಸೇರಿದಂತೆ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ ನೀಡಿದ ಕೆಂಗಲ್‌ ಹನುಮಂತಯ್ಯ ಅವರ ಸಾಧನೆ ಬಿಂಬಿಸುವ ಪ್ರದರ್ಶನ ನಡೆಸಲು ಮುಂದಾಗಿದೆ. ಇನ್ನು ಮೆಟ್ರೋ ಗೇಟ್ ಬಳಿ ಪ್ರೇಕ್ಷಕರಿಗೆ ಎಂಟ್ರಿಕೊಡಲಾಗಿದ್ದು, ಒಟ್ಟು ನಾಲ್ಕೂ ಗೇಟ್​ಗಳಲ್ಲಿ ಜನರಿಗೆ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ವಿಕ್ ಡೇಸ್ ನಲ್ಲಿ ಹಿರಿಯರಿಗೆ 70 ರೂಪಾಯಿ, ಮಕ್ಕಳಿಗೆ 30 ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಟ್ರಾಫಿಕ್ ಸಮಸ್ಯೆಯಾಗದಂತೆ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, 200 ಸಿಸಿಟಿವಿ ಅಳವಡಿಕೆ ಮಾಡಲಾಗುತ್ತಿದೆ. ಅಲ್ಲದೇ ಆಂಬುಲೆನ್ಸ್ ಹಾಗೂ ಮಹಿಳೆಯರಿಗೆಂದೇ ವಿಶೇಷ ಶಿಬಿರ ವ್ಯವಸ್ಥೆ ಮಾಡಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ, ಧಮ್, ತಾಕತ್ ಇಲ್ವಾ..? - ಸಚಿವ ಸುನೀಲ್ ಕುಮಾರ್ ಪ್ರಶ್ನೆ