Select Your Language

Notifications

webdunia
webdunia
webdunia
webdunia

ಡ್ಯಾಂಗಳು ಭರ್ತಿ: ಹೆಚ್ಚಿದ ಪ್ರವಾಹ ಭೀತಿ

ಡ್ಯಾಂಗಳು ಭರ್ತಿ: ಹೆಚ್ಚಿದ ಪ್ರವಾಹ ಭೀತಿ
ಬೆಂಗಳೂರು , ಶುಕ್ರವಾರ, 10 ಆಗಸ್ಟ್ 2018 (19:42 IST)
ರಾಜ್ಯದಲ್ಲಿ ಬಹುತೇಕ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಪ್ರವಾಹ ಭೀತಿ ತಲೆದೋರಿದೆ.

ಕೇರಳದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ರಾಜ್ಯದ ಮೇಲೆಯೂ ಬೀರುತ್ತಿದೆ. ಕಾವೇರಿ ನದಿಪಾತ್ರದಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯಲಾರಂಭಿಸಿದ್ದು, ನದಿ ತಟದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ನದಿ, ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಚಾಮರಾಜನಗರ, ಮೈಸೂರು, ಕೊಡಗು, ಚಿಕ್ಕಮಗಳೂರು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ. ಸೇತುವೆಗಳು ಮುಳುಗಡೆಯಾಗಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ. ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಕೇರಳಕ್ಕೆ 10 ಕೋಟಿ ನೆರವು: ಹೆಚ್ಡಿಕೆ