Webdunia - Bharat's app for daily news and videos

Install App

ಲೋಕಸಭಾ ಜಿಲ್ಲಾ, ತಾಲ್ಲೂಕ್ ಪಂಚಾಯಿತ್ ಚುನಾವಣೆಗೆ ದಳಪತಿಗಳ ಸಿದ್ದತೆ..!

Webdunia
ಶುಕ್ರವಾರ, 18 ಆಗಸ್ಟ್ 2023 (17:00 IST)
ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ರಾಜ್ಯದಲ್ಲಿ ಮತ್ತೆ ಪ್ರಾದೇಶಿಕ ಪಕ್ಷ ಆಕ್ಟಿವ್ ಆಗೋದಕ್ಕೆ ಸಿದ್ದತೆ ನಡೆಸಿದ್ದಾರೆ ದಳಪತಿಗಳು.. ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳಲ್ಲಿ ಪ್ರಾಬಲ್ಯ ಸಾದಿಸೋದಕ್ಕೆ ಮಾಜಿ ಪ್ರಧಾನಿ ದೇವೇಗೌಡ್ರು ಹಾಗೂ ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ.. ಹೀನಾಯ ಸೋಲಿನಿಂದ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬೊದಕ್ಕೆ ದಳಪತಿಗಳು ಮುಂದಾಗಿದ್ದು ಕೋರ್ ಕಮಿಟಿಯನ್ನ ರಚನೆ ಮಾಡಲಾಗಿದ್ದು ಅದರ ಸದಸ್ಯರನ್ನ ನೇಮಕ ಮಾಡಲಾಗಿದೆ.ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಪಕ್ಷ ಸಂಘಟನೆಗೆ ದಳಪತಿಗಳು ಸಿದ್ದರಾಗ್ತಿದ್ದಾರೆ.. ರಾಜ್ಯ ಸರ್ಕಾರದ ವಿರುದ್ದ ಹೋರಾಟ ಸೇರಿದಂತೆ ಮತ್ತೆ ಪಕ್ಷ ಸಂಘಟನೆ ಜೊತೆಗೆ ಮುಂಬರುವ ಲೋಕಸಭಾ ಜಿಲ್ಲಾ,‌ತಾಲ್ಲೂಕ್ ಪಂಚಾಯಿತ್ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆಗೆ ತಾಲೀಮು ಶುರುಮಾಡಿಕೊಂಡಿದ್ದಾರೆ.. ಈ ವಿಚಾರವಾಗಿ ಆಗಸ್ಟ್ 7 ರಂದು ಮಾಜಿ ಪ್ರಧಾನಿ ದೇವೇಗೌಡ್ರು, ಮಾಜಿ ಸಿಎಂ ಹೆಚ್ ಡಿ ಕೆ ಹಾಗೂ ರಾಜ್ಯಾದ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಕೋರ್ ಕಮಿಟಿ ರಚನೆ ಮಾಡಲಾಗಿತ್ತು.. ಇಗ ಕೋರ್ ಕಮಿಟಿ ಸಮಿತಿಗೆ ಸದಸ್ಯರನ್ನ ಆಯ್ಕೆ ಮಾಡಲಾಗಿದೆ.

ಶಾಸಕ ಜಿಟಿ ದೇವೇಗೌಡ ಅಧ್ಯಕ್ಷರನ್ನಾಗಿ ಹಾಗೂ ಮಾಜಿ ಶಾಸಕ ವೈಎಸ್ ವಿ ದತ್ತ ಅವರನ್ನ ಸಂಚಲಕರನ್ನಾಗಿ ನೇಮಕ ಮಾಡಲಾಗಿತ್ತು.. ಇವತ್ತು ಕೋರ್ ಕಮಿಟಿಯ ಸದಸ್ಯರನ್ನ ಆಯ್ಕೆ ಮಾಡಲಾಗಿದೆ..‌ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ 21 ಸದಸ್ಯರನ್ನ ನೇಮಕ ಮಾಡಲಾಗಿದೆ...ಜಿಟಿ ದೇವೇಗೌಡ, ಶಾಸಕ - ಅಧ್ಯಕ್ಷರಾಗಿ, ವೈ.ಎಸ್‌.ವಿ ದತ್ತ, ಮಾಜಿ ಶಾಸಕರು - ಸಂಚಾಲಕರಾಗಿ, ಸಾ,ರಾ, ಮಹೇಶ್, ಬಂಡೆಪ್ಪ ಕಾಶಂಪೂರ್, ಹೆಚ್.ಕೆ‌‌. ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಸಿ.ಎಸ್ ಪುಟ್ಟರಾಜು..ಸುರೇಶ್ ಗೌಡ, ಆಲ್ಕೋಡ್ ಹನುಮಂತಪ್ಪ, ಬಿ‌.ಎಂ. ಫಾರೂಕ್, ರಾಜೂಗೌಡ.ನೇಮಿರಾಜ್ ನಾಯಕ್, ಎಂ ಕೃಷ್ಣ ರೆಡ್ಡಿ, ದೊಡ್ಡಪ್ಪ ಗೌಡ ಎಸ್‌. ಪಾಟೀಲ್.ಕೆ.ಎಂ. ತಿಮ್ಮರಾಯಪ್ಪ, ವೀರಭದ್ರಪ್ಪ ಹಾಲರವಿ,ಪ್ರಸನ್ನ ಕುಮಾರ್ ಕೆ.ಬಿ., ಸುನೀತಾ ಚವ್ಹಾಣ..ಸಿ.ವಿ. ಚಂದ್ರಶೇಖರ್, ಸುಧಾಕರ್ ಶೆಟ್ಟಿ, ಸೂರಜ್ ಸೋನಿ ನಾಯಕ್ ಕಮಿಟಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.

ನ್ನೂ ಕೋರ್ ಕಮಿಟಿಗೆ ನೀಡಿರುವ ಜವಾಬ್ದಾರಿಗಳನ್ನ ನೋಡೋದಾದ್ರೆ....
 
*ಪಕ್ಷ ಸಂಘಟನೆ,ಬಲವರ್ಧನೆ, ಸಂಘಟನೆ ಚುರುಕು
 
*ಲೋಕಸಭೆ ಚುನಾವಣೆಗೆ ಕ್ಷೇತ್ರದ ಪ್ರತಿನಿಧಿಗಳ ಜೊತೆ ಸಭೆ
 
*ಜೆಡಿಎಸ್ ಪಕ್ಷದ ವತಿಯಿಂದ ಸ್ಪರ್ಧಿಸುವ ಕ್ಷೇತ್ರಗಳನ್ನು ಗುರುತಿಸುವುದು
 
*ಜೊತೆಗೆ ಲೋಕಸಭೆಗೆ ಸ್ಪರ್ಧಿಸುವ ಆಕಾಂಕ್ಷೆಗಳನ್ನು ಶಾಟ್ ಲಿಸ್ಟ್ ಮಾಡುವುದು
 
*ZP,TP ಚುನಾವಣೆಗೆ ಪೂರ್ವಬಾವಿ ಸಭೆ ನಡೆಸುವುದು
 
*ಜಿಲ್ಲಾಧ್ಯಕ್ಷರಿಗೆ,ಪದಾಧಿಕಾರಿಗಳಿಗೆ ಜವಾಬ್ದಾರಿ ನೀಡುವುದು
 
*ರಾಜ್ಯದ ಮಟ್ಟದ ವಿವಿಧ ವಿಭಾಗಗಳ ಸಕ್ರಿಯಗೊಳಿಸಲು ಮುಖ್ಯಸ್ಥರ ನೇಮಕಾತಿ 
 
*ಸೂಕ್ತ ಮುಖಂಡರ ಹೆಸರು ಶಿಫಾರಸ್ಸು ಮಾಡುವುದು
 
*ಅಗತ್ಯವಿದ್ದರೆ ಕೋರ್ ಕಮಿಟಿ ಸದಸ್ಯರನ್ನ ಆಯ್ಕೆ ಮಾಡಿಕೊಳ್ಳಬಹುದು
 
*ಆಗಸ್ಟ್ 20 ರಿಂದ ಪ್ರವಾಸ ಆರಂಭಿಸಿ ಸೆ.30 ರೊಳಗೆ ಮುಗಿಸಬೇಕು
 
*ಪ್ರವಾಸದ ವಿವರವನ್ನ ಜೆಡಿಎಸ್ ಕಚೇರಿಗೆ ವರದಿ ಸಲ್ಲಿಸುವುದು
 
*ಪ್ರವಾಸದಲ್ಲಿ ಬರುವ ಪ್ರಮುಖ ವಿಚಾರಗಳನ್ನ ಸಮಿತಿ ಅಗತ್ಯವಿರುವ
ಸೂಕ್ತ ನಿರ್ಣಯ ಕೈಗೊಳ್ಳುವ ಅಧಿಕಾರ ನೀಡಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments