ಜಮೀನು ವಿವಾದಕ್ಕೆ ಬಿದ್ದವು ಜೋಡಿ ಹೆಣ!

Webdunia
ಮಂಗಳವಾರ, 5 ಫೆಬ್ರವರಿ 2019 (16:26 IST)
ಅಪ್ಪ ಹಾಗೂ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಜಮೀನು ವಿವಾದದ ಹಿನ್ನೆಲೆಯಲ್ಲಿ ತಂದೆ ಮತ್ತು ಮಗನನ್ನು ಮಚ್ಚಿನಿಂದ ಕೊಚ್ಚಿ ಜೋಡಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ  ಹೊಸಕೋಟೆಯ ಮುತ್ತಕದಹಳ್ಳಿಯಲ್ಲಿ ನಡೆದಿದೆ.

ಮುತ್ತಕದಹಳ್ಳಿಯ ನಾರಾಯಣರೆಡ್ಡಿ(62), ಮತ್ತವರ ಪುತ್ರ ಲಿಂಗಾರೆಡ್ಡಿ(30)ಕೊಲೆಯಾದವರು. ಕೃತ್ಯವೆಸಗಿದ ಬಾಬು ಅನುಗೊಂಡನಹಳ್ಳಿ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಕೊಲೆಯಾದ ನಾರಾಯಣರೆಡ್ಡಿಯು ಆರೋಪಿ ಬಾಬು(35)ಗೆ ಮುತ್ತಕದಹಳ್ಳಿಯ ಸರ್ವೆ ನಂ.18 ರಲ್ಲಿ 2 ಎಕರೆ ಜಮೀನು ಮಾರಿದ್ದರು. ಆದರೆ ಅದನ್ನು ನೋಂದಣಿ ಮಾಡಿಕೊಟ್ಟಿರಲಿಲ್ಲ. ಅಂದಿನಿಂದಲೂ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಕಳೆದ 15ವರ್ಷಗಳಿಂದಲೂ ಜಮೀನು ವಿವಾದದ ಕುರಿತಾಗಿ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.

ವಿಚಾರಣೆ ಮುಗಿದು ತೀರ್ಪು ಹೊರಬರದಿದ್ದರಿಂದ ಆಕ್ರೋಶಗೊಂಡ ಬಾಬು ನಿನ್ನೆ ಸಂಜೆ ನಾರಾಯಣರೆಡ್ಡಿ ಹಾಗೂ ಆತನ ಮಗ ಲಿಂಗಾರೆಡ್ಡಿ ಜಮೀನಿನಲ್ಲಿ ನೀಲಿಗಿರಿ ಮರದ ಕೊಂಬೆಗಳನ್ನು ಕತ್ತರಿಸುತ್ತಿದ್ದಾಗ ಏಕಾಏಕಿ ಬಂದು ಜಗಳ ಮಾಡಿ ಕುರಿ ಕಡಿಯುವ ಮಚ್ಚಿನಿಂದ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಬಳಿಕ ಅನುಗೊಂಡನಹಳ್ಳಿ ಪೋಲಿಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರದೀಪ್ ಈಶ್ವರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟ ಬಿಜೆಪಿ, ಕಾರಣ ಇಲ್ಲಿದೆ

ತಮಿಳುನಾಡು ವಿಧಾನಸಭಾ ಚುನಾವಣೆ: ಗೃಹೋಪಯೋಗಿ ಕೂಪನ್‌ ಪ್ರಕಟಿಸಿದ ಉದಯನಿಧಿ ಸ್ಟಾಲಿನ್, ಎಷ್ಟು ಹಣ ಗೊತ್ತಾ

ಪ್ಲಾಟ್‌ಫಾರ್ಮ್‌ನಲ್ಲಿ ನಿಂತವರ ಮೇಲೆಯೇ ಎರಗಿದ ಬಸ್‌, ಎದೆ ಝಲ್ಲೆನಿಸುತ್ತದೆ, Video

ಅಹಿಂದ ಹೆಸರಲ್ಲಿ ಪ್ರಚಾರ ಪಡೆದ ಸಿದ್ದರಾಮಯ್ಯ ಅವರಿಗಾಗಿ ಏನೂ ಮಾಡಿಲ್ಲ: ಸುನಿಲ್ ಕುಮಾರ್‌

ತಪ್ಪಿಗಾಗಿ ಪ್ರತಿಭಟನಕಾರರಲ್ಲಿ ಕಿವಿ ಹಿಟ್ಟು ಕ್ಷಮೆ ಕೇಳಿದ್ದ ಐಎಎಸ್ ಅಧಿಕಾರಿ ರಿಂಕು ಸಿಂಗ್ ರಾಜೀನಾಮೆ

ಮುಂದಿನ ಸುದ್ದಿ
Show comments