Webdunia - Bharat's app for daily news and videos

Install App

ಅಶೋಕ್ ಅಣ್ಣನಿಗೆ ಕೋಳಿ ಮತ್ತು ಮೇಕೆ ಮಾಂಸದ ರುಚಿ ಚೆನ್ನಾಗಿ ಗೊತ್ತಿದೆ

Webdunia
ಶನಿವಾರ, 1 ಜನವರಿ 2022 (17:53 IST)
ಕಾಂಗ್ರೆಸ್ ಅವರು ಪಾದಯಾತ್ರೆ ನೆಪದಲ್ಲಿ ಮೇಕೆ ಮಾಂಸ ತಿನ್ನಲು ಹೊರಟಿದ್ದಾರೆ ಎಂಬ ಸಚಿವ ಅಶೋಕ್ ಹೇಳಿಕೆಗೆ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಅಶೋಕಣ್ಣನಿಗೆ ಮೇಕೆ, ಕುರಿ, ನಾಟಿಕೋಳಿ ರುಚಿ ಚೆನ್ನಾಗಿ ಗೊತ್ತಿದೆ.
ಮೇಕೆ ಮಾಂಸ ತಿನ್ನಿಸೋಕೆ ಪ್ರಯತ್ನ ಮಾಡುತ್ತಿಲ್ಲ ಎಂದು ಹರಿಹಾಯ್ದರು. ಇನ್ನೂ ಸಚಿವ ಆರ್ ಅಶೋಕಣ್ಣನಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇಲ್ಲ. ಇಡೀ ದೇಶದಲ್ಲಿ ಶೇ.37ರಷ್ಟು ತೆರಿಗೆಯನ್ನು ಪಾವತಿಸುತ್ತಾರೆ. ಬೆಂಗಳೂರಿಗರು ಶೇ.37ರಷ್ಟು ತೆರಿಗೆಯನ್ನು ಪಾವತಿಸುತ್ತಾರೆ.
 
ಅಂತಹ ಬೆಂಗಳೂರಿಗರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು. ಶುದ್ಧ ಕಾವೇರಿ ನೀರು ಕೊಡಬೇಕೆಂದು ನಾವು ಪ್ರಯತ್ನಿಸುತ್ತಿದ್ದೇವೆ. ಈ ವಿಚಾರ ಯಾವುದೂ ಸಚಿವ ಅಶೋಕಣ್ಣನಿಗೆ ಗೊತ್ತಿಲ್ಲ ಅಂತ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. ಇನ್ನೂ ಪಾದಯಾತ್ರೆಗೆ ಗೃಹ ಸಚಿವರ ಅನುಮತಿ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಗೃಹ ಸಚಿವರ ಅನುಮತಿ ಬೇಡ, ರಕ್ಷಣೆಯೂ ಬೇಡ. ದೇವೇಗೌಡರು ಪಾದಯಾತ್ರೆ ಮಾಡಿದಾಗ ಅನುಮತಿ ನೀಡಿದ್ರಾ? ಸ್ಟ್ಯಾಂಪ್ ಹಾಕಿ ಅನುಮತಿ ನೀಡಿದ್ದರಾ? ಹೋರಾಟಗಾರರು ಕೋಳಿಯನ್ನು ಕೇಳಿ ಮಸಾಲೆ ಅರಿತಾರಾ? ಎಂದು ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments