Select Your Language

Notifications

webdunia
webdunia
webdunia
webdunia

ಪರಿಷತ್ ಸದಸ್ಯರು ಅಧಿಕಾರ ಸ್ವೀಕಾರ ಮುಹೂರ್ತ ಫಿಕ್ಸ್

ಪರಿಷತ್ ಸದಸ್ಯರು ಅಧಿಕಾರ ಸ್ವೀಕಾರ ಮುಹೂರ್ತ ಫಿಕ್ಸ್
ಬೆಂಗಳೂರು , ಶನಿವಾರ, 1 ಜನವರಿ 2022 (15:41 IST)
ವಿಧಾನ ಪರಿಷತ್ ನ ಉಪ ಕಾರ್ಯದರ್ಶಿ ಬಿಎ ಬಸವರಾಜ ಮಾಹಿತಿ ನೀಡಿದ್ದು, ದಿನಾಂಕ 06-01-2022ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ 25 ನೂತನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ.
ಡಿಸೆಂಬರ್ 10ರಂದು 25 ಕರ್ನಾಟಕ ವಿಧಾನಪರಿಷತ್ತಿನ (Karnataka Legislative Council) ಸ್ಥಾನಗಳ ಆಯ್ಕೆಗಾಗಿ ಮತದಾನ ನಡೆದಿತ್ತು. ಈ ಮತದಾನದ ಮತಏಣಿಕೆ ಕಾರ್ಯ ಡಿಸೆಂಬರ್ 14ರಂದು ನಡೆದಿತ್ತು. 25 ಕ್ಷೇತ್ರಗಳಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೇ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ಒಂದೊಂದು ಕ್ಷೇತ್ರದಲ್ಲಿ ಸಾಧಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಎಣ್ಣೆ ಕಿಕ್ ಪೊಲೀಸರ ಜೊತೆ ವಾಗ್ವಾದ 8 ಯುವಕರು ಅರೆಸ್ಟ್