ರಾಮನಗರ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ.. ಇಲ್ಲಿ ಒಕ್ಕಲಿಗ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದರೆ ಗೆಲುವು ಸುಲಭ ಎಂಬ ಮಾತಿದೆ. ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಈ ಭಾರಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಈ ಕ್ಷೇತ್ರದ JDS ಅಭ್ಯರ್ಥಿಯಾಗಿ ನಿಲ್ಲಿಸಲು ತಯಾರಿ ನಡೆಸಿದ್ದಾರಂತೆ.. ಈ ಹಿನ್ನೆಲೆಯಲ್ಲಿ JDSಗೆ ಠಕ್ಕರ್ ಕೊಡಲು ಕಾಂಗ್ರೆಸ್ ಸಜ್ಜಾಗಿದ್ದು, ಒಕ್ಕಲಿಗ ನಾಯಕನ ಪ್ರತಿ ಸ್ಪರ್ಥಿಯಾಗಿ ಒಕ್ಕಲಿಗ ಕೈ ನಾಯಕ D.Kಸುರೇಶ್ಗೆ ಟಿಕೆಟ್ ನೀಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.. ಈ ಹಿಂದೆ ಮಾತನಾಡಿದ್ದ KPCC ಅಧ್ಯಕ್ಷ D.K. ಶಿವಕುಮಾರ್ D.K. ಸುರೇಶ್ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲವೆಂದು ಹೇಳಿದ್ರು.. ಆದರೆ ರಾಮನಗರ JDS ಅಭ್ಯರ್ಥಿ ಬದಲಾವಣೆ ಆಗುವ ಮುನ್ಸೂಚನೆ ಮೇರೆಗೆ D.K ಸುರೇಶ್ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ.