Select Your Language

Notifications

webdunia
webdunia
webdunia
webdunia

ಶಶಿಕಲಾಗೆ ಹಾಯ್ ಹೇಳಿದ್ದೇ ತಪ್ಪಾಯ್ತು.. ಸೈನೈಡ್ ಮಲ್ಲಿಕಾ ಶಿಫ್ಟ್

sasikala
bengaluru , ಬುಧವಾರ, 22 ಫೆಬ್ರವರಿ 2017 (12:16 IST)
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಣ್ನಾಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಮತ್ತು ಸೈನೈಡ್ ಕಿಲ್ಲರ್ ಮಲ್ಲಿಕಾ ಅಕ್ಕಪಕ್ಕದ ಸೆಲ್`ನಲ್ಲಿದ್ದರು. ಶಶಿಕಲಾ ಬಂದ ದಿನ ಸೈನೈಡ್ ಮಲ್ಲಿಕಾ ಹಾಯ್ ಹೇಳಿದ್ದರು ಎಂದೂ ಸಹ ಸುದ್ದಿಯಾಗಿತ್ತು. ಇದಾದ ಬಳಿ ಶಶಿಕಲಾ ಭದ್ರತೆಯ ಕಾರಣವೊಡ್ಡಿ ಚೆನ್ನೈ ಜೈಲಿಗೆ ಶಿಫ್ಟ್ ಮಾಡಲು ಕೋರಿದ್ದರು. ಆದರೆ, ಈಗ ಸೈನೈಡ್ ಮಲ್ಲಿಕಾಳನ್ನೇ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರದಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾವಣೆ ಮಾಡಲಾಗಿದೆ.


ಯಾರಿದು ಮಲ್ಲಿಕಾ..?: 6 ಮಹಿಳೆಯರನ್ನ ಕೊಂದು ಜೈಲು ಸೇರಿರುವ ಕೈದಿ ಸೈನೈಡ್ ಮಲ್ಲಿಕಾ. ದೇವಸ್ಥಾನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶ್ರೀಮಂತ ಮಹಿಳೆಯರನ್ನ ಪರಿಚಯ ಮಾಡಿಕೊಳ್ಳುತ್ತಿದ್ದ ಮಲ್ಲಿಕಾ ಬಳಿಕ ಸೈನೈಡ್ ನೀಡಿ ಅವರನ್ನ ಕೊಂದು ಒಡವೆ ದೋಚುತ್ತಿದ್ದಳು.

2008ರಲ್ಲಿ ಮಲ್ಲಿಕಾಳನ್ನ ಬಂಧಿಸಲಾಗಿದ್ದು, ಹಲವು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಈಗ ಭದ್ರತೆಯ ಕಾರಣವೊಡ್ಡಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಶಶಿಕಲಾ ಮತ್ತು ಮಲ್ಲಿಕಾ ಜೈಲಿನಲ್ಲಿ ಒಳ್ಳೆಯ ಗೆಳೆಯರಾಗಿದ್ದರು. ಶಶಿಕಾಲರನ್ನ ಕ್ಯೂನಲ್ಲಿ ನಿಲ್ಲಲು ಬಿಡದೇ ತಾನೇ ಊಟ ತಂದು ಕೊಡುತ್ತಿದ್ದರೆಂದು ಮೂಲಗಳನ್ನುದ್ದೇಶಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

( ವೈರಲ್ ವಿಡಿಯೋ) ಹಾಟೆಸ್ಟ್ ಬಾತ್ ರೂಮ್ ಎಂಎಂಎಸ್