Publish Date: Wed, 15 Jul 2026 (17:30 IST)
Updated Date: Wed, 15 Jul 2026 (17:53 IST)
ಬೆಂಗಳೂರು: ದೆಹಲಿಯಲ್ಲಿ ನಡೆದ CWRC ಬೋರ್ಡ್ ಕುಡಿಯಲು ನೀರು ಮೀಸಲು ಇಡಿ ಎಂದು ಆದೇಶ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಇವತ್ತು ದೆಹಲಿಯಲ್ಲಿ CWRC ಮೀಟಿಂಗ್ ನಡೆದಿದೆ. ಬೋರ್ಡ್ ಅವರು ಕುಡಿಯೋ ನೀರು ಕೊಡಿ ಅಂತ ಆದೇಶ ಮಾಡಿದ್ದಾರೆ. ಇನ್ನೂ ನೀರು ಬಿಡುಗಡೆಗೆ ತಮಿಳುನಾಡು ಡಿಮ್ಯಾಂಡ್ ಮಾಡಿದ್ದು, ನಮ್ಮ ರಾಜ್ಯದ ಅಡ್ವೈಸರ್‌ಗಳು ವಿಸಿ ಮೀಟಿಂಗ್ ನಲ್ಲಿ ನಮ್ಮ ರಾಜ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
ತಕ್ಷಣ ತಮಿಳುನಾಡಿಗೆ ನೀರು ಬಿಡಲ್ಲ. ತಮಿಳುನಾಡಿಗೆ ನೀರು ಬಿಡಿ ಅಂತ ಆದೇಶ ಮಾಡಿಲ್ಲ. ಅದಕ್ಕೆ ನೀರು ಬಿಡಲ್ಲ. ನೀರು ಬಿಡುತ್ತಾರೆ ಅಂತ ಯಾರು ಬೇಕಾದರೂ ಆರೋಪ ಮಾಡಲಿ. ಆದರೆ ಎಷ್ಟು ನೀರು ಬಿಡಲಾಗಿದೆ ಅಂತ ಬಿಳುಗೊಂಡ್ಲುವಿನಲ್ಲಿ ಗೊತ್ತಾಗುತ್ತದೆ. ಈಗ ತಮಿಳುನಾಡಿಗೆ 3 ಟಿಎಂಸಿ ನೀರು ಮಾತ್ರ ಬಿಟ್ಟಿರೋದು. ಇನ್ನೂ ಹೆಚ್ಚಿನ ನೀಡು ಬಿಡಲು ನಮ್ಮ ಬಳಿ ನೀರಿಲ್ಲ ಎಂದರು.
About Writer
ಸಂಪ್ರಿಯ
ಕನ್ನಡ ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷದಲ್ಲಿ ಬೇರೆ ಬೇರೆ ಸಂಸ್ಥೆಗಳಲ್ಲಿ ರಿಪೋರ್ಟರ್ ಆಗಿ, ಸಬ್ ಎಡಿಟರ್ ಆಗಿ, ಇದೀಗ ಕಂಟೆಂಟ್ ರೈಟರ್ ಆಗಿ ವೆಬ್ದುನಿಯಾದಲ್ಲಿ ಕೆಲಸ. ಆಳ್ವಾಸ್ ಕಾಲೇಜಿನಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು 2016ನೇ ಸಾಲಿನಲ್ಲಿ ಪಡೆದಿರುತ್ತೇನೆ. ಮನರಂಜನೆ, ಲೈಫ್ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ವಿಶೇಷ ಆಸಕ್ತಿ. ....
ಮತ್ತಷ್ಟು ಓದಿ