ಕಪ್ಪು ಹಣ ತಡೆಗಟ್ಟಲು ದೇಶಾದ್ಯಂತ 500, 1000 ರೂಪಾಯಿ ನೋಟ್ ಬ್ಯಾನ್ ಬೆನ್ನಲ್ಲೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ಹಣವನ್ನು ವಶಕ್ಕೆಪಡೆದುಕೊಂಡಿದ್ದಾರೆ.
ರಾಜಧಾನಿ ಬೆಂಗಳೂರಿನ ಯಲಹಂಕದಲ್ಲಿರುವ ಫೈನಾನ್ಶಿಯರ್ ಮನೆ, 3 ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಫೈನಾನ್ಶಿಯರ್ ಮನೆಯ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು 16 ಕೋಟಿ ರೂಪಾಯಿ ಅಕ್ರಮ ನಗದು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ನಿನ್ನೆ ತುಮಕೂರಿನ ಪಾವಗಡ್‌ದ ಕರ್ನಾಟಕ ಬ್ಯಾಂಕ್‌ನಿಂದ ಗುತ್ತಿಗೇದಾರನ ಆಪ್ತ 50 ಲಕ್ಷ ರೂಪಾಯಿ ತೆಗೆದುಕೊಂಡು ಹೋಗಿರುವ ಘಟನೆ ಮಾಸುವ ಮುನ್ನವೆ, ಮಂಗಳೂರಿನಲ್ಲಿ ಹಳೆಯ 500, 1000 ರೂಪಾಯಿಗಳನ್ನು ಪಡೆದುಕೊಂಡು ಅಕ್ರಮವಾಗಿ ಹೊಸ ನೋಟು ನೀಡುತ್ತಿರುವ ಕೋ-ಆಪರೇಟಿವ್ ಬ್ಯಾಂಕ್‌ಗಳ ಮೇಲೆ ದಾಳಿ ನಡೆಸಿ ಕಪ್ಪು ಸರದಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ