Select Your Language

Notifications

webdunia
webdunia
webdunia
webdunia

ನೋಟ್ ಬ್ಯಾನ್ ಒಂದು ರಾಜಕೀಯ ಗಿಮಿಕ್: ಸಚಿವ ಖಾದರ್

ನೋಟ್ ಬ್ಯಾನ್ ಒಂದು ರಾಜಕೀಯ ಗಿಮಿಕ್: ಸಚಿವ ಖಾದರ್
ಬೆಂಗಳೂರು , ಗುರುವಾರ, 17 ನವೆಂಬರ್ 2016 (18:57 IST)
ಕೇಂದ್ರ ಸರಕಾರ ಬಡವರ ಸಾಲ ಮನ್ನಾ ಮಾಡಿಲ್ಲ. ಆದರೆ, ಶ್ರೀಮಂತರ ಸಾಲವನ್ನು ಮನ್ನಾ ಮಾಡುತ್ತಿದೆ. ಕೇವಲ ಕೈಗಾರಿಕೆ ಕ್ಷೇತ್ರದ ಸಾಲ ಮನ್ನಾ ಮಾಡುತ್ತಿರುವುದು ಏಕೆ? ವಿದ್ಯಾರ್ಥಿಗಳ ಸಾಲವನ್ನು ಮನ್ನಾ ಮಾಡಿ. ಕೇವಲ ಶ್ರೀಮಂತರ ಸಾಲ ಮನ್ನಾ ಮಾಡುತ್ತಿರುವುದನ್ನು ಗಮನಿಸಿದರೆ ನೋಟ್ ಬ್ಯಾನ್ ಒಂದು ರಾಜಕೀಯ ಗಿಮಿಕ್ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು. 
 
ನಿಮ್ಮ ಬ್ಯಾಂಕ್ ಖಾತೆಗೆ 2.5 ಲಕ್ಷ ರೂಪಾಯಿ ಜಮೆ ಮಾಡಿದರೆ ಟ್ಯಾಕ್ಸ್ ಬೀಳುತ್ತೆ. ಟ್ಯಾಕ್ಸ್ ಬಿದ್ದರೆ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎಂದು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಎಚ್ಚರಿಕೆ ನೀಡಿದ್ದಾರೆ.
 
ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಹೊಂದಿರುವವರು ಆದಾಯ ತೆರಿಗೆ ಮಾಡುವಂತಿಲ್ಲ. ಸ್ವಂತ ಕಾರು ಹಾಗೂ ನಗರ ಪ್ರದೇಶದಲ್ಲಿ ಸ್ವಂತ ಮನೆ ಹೊಂದುವಂತಿಲ್ಲ. ತಮ್ಮ ಖಾತೆಗೆ 2.5 ಲಕ್ಷ ಹಣ ಜಮೆ ಮಾಡಿದರೆ ಟ್ಯಾಕ್ಸ್ ಬೀಳುತ್ತೆ. ಹೀಗಾಗಿ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎಂದರು.
 
ಏಕಾಏಕಿ ನೋಟು ನಿಷೇಧ ಮಾಡಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಜನತೆಗೆ ತೊಂದರೆ ಆಗದಿರಲಿ ಎಂದು ಸಾಲದ ರೂಪದಲ್ಲಿ ಪಡಿತರವನ್ನು ನೀಡಲು ನಿರ್ಧರಿಸಿದ್ದೇವೆ. ಇದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ 40 ಕೋಟಿ ಹೊರೆಯಾಗಲಿದೆ. ಸಾಲದ ರೂಪದಲ್ಲಿ ಪಡೆದ ಪಡಿತರವನ್ನು ಡಿಸೆಂಬರ್ ನಂತರ ಮರುಪಾವತಿಸಬೇಕು ಎಂದು ಆಹಾರ ಖಾತೆ ಸಚಿವ ಯು.ಟಿ.ಖಾದರ್ ಹೇಳಿದರು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಲಂಚ ಸ್ವೀಕರಿಸಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಿದೆ : ಅರವಿಂದ್ ಕೇಜ್ರಿವಾಲ್