Select Your Language

Notifications

webdunia
webdunia
webdunia
webdunia

ಕಲ್ಲಡ್ಕ ಉದ್ವಿಗ್ನ: ಜೂನ್ 2ರವರೆಗೆ ನಿಷೇಧಾಜ್ಞೆ ಜಾರಿ

ಕಲ್ಲಡ್ಕ ಉದ್ವಿಗ್ನ: ಜೂನ್ 2ರವರೆಗೆ ನಿಷೇಧಾಜ್ಞೆ ಜಾರಿ
ಕಲ್ಲಡ್ಕ , ಶನಿವಾರ, 27 ಮೇ 2017 (13:19 IST)
ಯುವಕನೊಬ್ಬನಿಗೆ ಮೂವರು ದುಷ್ಕರ್ಮಿಗಳು ಚೂರಿಯಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕ ಉದ್ವಿಗ್ನಗೊಂಡಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಾದ್ಯಂತ 3 ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
 

ಈ ಕುರಿತು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಉಸ್ತುವಾರಿ ಸಚಿವ ರಮಾನಾಥ್ ರೈ, ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗಿ ತಿಳಿಸಿದ್ದಾ, ದುಷ್ಕರ್ಮಿಗಳನ್ನ ಬಂಧಿಸುವುದಾಗಿ ತಿಳಿಸಿದ್ದಾರೆ.

ಕಲ್ಲಡ್ಕ ನಿವಾುಷಸಿ ಮುಹಮ್ಮದ್ ಹಾಶಿರ್ ನಿನ್ನೆ ಮಧ್ಯಾಹ್ನ ನಮಾಜ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಇರಿತದಿಂದ ಬೆನ್ನಿಗೆ ಗಾಯವಾಗಿದ್ದು, ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕಲ್ಲಡ್ಕದಲ್ಲಿ ಬಿಡು ಬಿಟ್ಟಿದ್ದು, ಭದ್ರತೆ ಒದಗಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಡ್ನ್ಯಾಪ್ ಪ್ರಕರಣ: ಎರಡು ಕನಸು ಚಿತ್ರದ ನಿರ್ದೇಶಕನ ಬಂಧನ