Select Your Language

Notifications

webdunia
webdunia
webdunia
webdunia

ಸೋನಿಯಾ ವಿದೇಶ ಭೇಟಿ ಬಗ್ಗೆ ಸಿ.ಟಿ. ರವಿ ವಿವಾದಾತ್ಮಕ ಟ್ವೀಟ್

ಸಿ.ಟಿ. ರವಿ
ಬೆಂಗಳೂರು , ಶುಕ್ರವಾರ, 10 ಮಾರ್ಚ್ 2017 (12:44 IST)
ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯಲು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳಿರುವ ಬಗ್ಗೆ ಕಾಂಗ್ರೆಸ್ ಶಾಸಕ ಸಿ.ಟಿ. ರವಿ ವಿವಾದಾತ್ಮಕ ಟ್ವಿಟ್ ಮಾಡಿದ್ದಾರೆ.

ಸೋನಿಯಾಗಾಂಧಿಯವರು ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದ್ದಾರೋ ಅಥವಾ ತಮ್ಮ ಖಾತೆಯಲ್ಲಿರುವ ಹಣವನ್ನ ಸುರಕ್ಷಿತ ಜಾಗಕ್ಕೆ ವರ್ಗಾಯಿಸಲು ತೆರಳಿದ್ದಾರೋ ಎಂದು ಸಿ.ಟಿ. ರವಿ ಟ್ವೀಟ್ ಮಾಡಿದ್ದಾರೆ. 6 ವರ್ಷ ದೇಶವನ್ನಾಳಿದ ಆ ಕುಟುಂಬ ಸೋನಿಯಾ ಗಾಂಧಿ ಚಿಕಿತ್ಸೆ ಪಡೆಯುವಂತಹ ಎಂದು ಆಸ್ಪತ್ರೆಯನ್ನ ಕಟ್ಟದಿರುವುದು ನಾಚಿಕೆಗೇಡು ಎಂದಿದ್ದಾರೆ.

ಇದೇವೇಳೆ, ಸೋನಿಯಾಗಾಂಧಿಯನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರೆ ಕರ್ನಾಟಕ ಸಿಎಂ ಉತ್ತಮವಾಗಿ ನೋಡಿಕೊಳ್ಳುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಸಿ.ಟಿ. ರವಿ ಟ್ವಿಟ್ ಬಗ್ಗೆ ಖಾಸಗಿ ಚಾನಲ್`ಗೆ ಪ್ರತಿಕ್ರಿಯಿಸಿರುವ ಕ಻ಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್, ಈ ರೀತಿಯ ಕೀಳುಮಟ್ಟದ ಟ್ವಿಟ್ ಪ್ರಚಾರದ ಗಿಮಿಕ್ ಎಂದಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಟೆಲ್ ಹೊಸ ಆಫರ್ ಸುದ್ದಿ ಓದಿ ಮೋಸ ಹೋಗಬೇಡಿ!