ಸಿದ್ದರಾಮಯ್ಯನವರ ಶಾಂತಿ ದೂತರೇ ಮದ್ದೂರಿನಲ್ಲಿ ಗಣೇಶನ ಮೇಲೆ ಕಲ್ಲು ಎಸೆದಿದ್ದು: ಸಿಟಿ ರವಿ

Krishnaveni K
ಸೋಮವಾರ, 8 ಸೆಪ್ಟಂಬರ್ 2025 (12:46 IST)
ಬೆಂಗಳೂರು: ಮದ್ದೂರಿನಲ್ಲಿ ನಡೆದ ಗಣೇಶ ಮೆರವಣಿಗೆ ಮೇಲೆ ಅನ್ಯ ಕೋಮಿನವರಿಂದ ಕಲ್ಲು ತೂರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಸಿಟಿ ರವಿ, ಸಿದ್ದರಾಮಯ್ಯನವರೇ ನಿಮ್ಮ ಶಾಂತಿದೂತರೇ ಈ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೊನ್ನೆಯಷ್ಟೇ ಅರಮನೆ ಮೈದಾನದಲ್ಲಿ ಈದ್ ಸಮಾವೇಶದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಇದನ್ನೇ ಇಟ್ಟುಕೊಂಡು ಸಿಟಿ ರವಿ ವ್ಯಂಗ್ಯ ಮಾಡಿದ್ದಾರೆ. ‘ನೀವು ಎರಡು ದಿನದ ಹಿಂದೆ ಹಾಡಿ ಹೊಗಳಿದ “ಶಾಂತಿದೂತರು” ಮಂಡ್ಯದ ಮದ್ದೂರಿನಲ್ಲಿ ಗಣಪತಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಸಾಗರದಲ್ಲಿ ಗಣಪತಿಯ ವಿಗ್ರಹಕ್ಕೆ ಉಗುಳುವ ಹೀನ ಕೆಲಸ ಮಾಡಿದ್ದಾರೆ. ಜಾಗತಿಕ ಭಯೋತ್ಪಾದನೆಗೆ ದೊಡ್ಡ ಕೊಡುಗೆ ಕೊಟ್ಟವರು, ನೀವು ಹೊಗಳಿದ ಶಾಂತಿದೂತರೆ. ಭರತಖಂಡದಲ್ಲಿ ಹಿಂದೂಗಳ ಮಾರಣಹೋಮಕ್ಕೆ ಕಾರಣರಾದವರು,ನೀವು ಹೊಗಳಿದ ಶಾಂತಿದೂತರೆ. ಭಾರತವನ್ನು ವಿಭಜಿಸುವ ಮೂಲಕ ಅಖಂಡ ಭಾರತವನ್ನು ತುಂಡರಿಸಿದವರು, ನೀವು ಹೊಗಳಿದ ಶಾಂತಿದೂತರೆ.

ಕಾಶ್ಮೀರದಲ್ಲಿ ಭಾರತದ ರಾಷ್ಟ್ರೀಯ ಲಾಂಛನ "ಅಶೋಕಚಕ್ರ"ವನ್ನು ಒಡೆದು ಹಾಕಿದವರು, ನೀವು ಹೊಗಳಿದ ಶಾಂತಿದೂತರೆ. ನೆನಪಿಡಿ , ಈ ನಿಮ್ಮ ಶಾಂತಿದೂತರನ್ನು ನಂಬಿಕೊಂಡಿದ್ದರೆ ಮುಂದೊಂದು ದಿನ ದೇಶದಲ್ಲಿ "ಸಂವಿಧಾನ"ದ ಬದಲಿಗೆ "ಷರಿಯಾ" ಆವರಿಸಿಕೊಂಡೀತು.

ರಾಷ್ಟ್ರಧ್ವಜ ಮತ್ತು ರಾಷ್ಟ್ರಲಾಂಛನವನ್ನು ಗೌರವಿಸಲಾರದವರು ಸಂವಿಧಾನವನ್ನು ಉಳಿಸಿಯಾರೆ? ಇನ್ನೆಷ್ಟು ದಿನ ಮತಗಳಿಕೆಗಾಗಿ ಸುಳ್ಳಿನ ಭರಾಟೆ? ಸತ್ಯ ಹೇಳಿ ಜನಜಾಗೃತಿ ಮೂಡಿಸಿ, ಆಗಲಾದರೂ ಜನರಿಗೆ ಶಾಂತಿದೂತರ ಹೀನಕೃತ್ಯ ಅರ್ಥವಾದೀತು; ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾದರೂ ಆದೀತು’ ಎಂದಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರೆಜಿಲ್ ಮಾಡೆಲ್ ನಿಂದ ವೋಟ್ ಎಂದ ರಾಹುಲ್ ಗಾಂಧಿ: ಇಟೆಲಿ ಮಹಿಳೆಯೂ ಮಾಡಿಲ್ವಾ ಎಂದ ಬಿಜೆಪಿ

ಬಿಹಾರದಲ್ಲಿ ಮೊದಲ ಹಂತದ ಮತದಾನ ಶುರು: ಪ್ರಧಾನಿ ಮೋದಿ ಮಾಡಿದ ಮನವಿಯೇನು

Karnataka Weather: ರಾಜ್ಯದಲ್ಲಿ ಇನ್ನೆಷ್ಟು ದಿನ ಮಳೆ ಇಲ್ಲಿದೆ ವಿವರ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಮುಂದಿನ ಸುದ್ದಿ
Show comments