CT Ravi: ಭಯೋತ್ಪಾದಕರು ಹುಟ್ಟುತ್ತಿರುವುದು ಮದರಸಾಗಳಿಂದಲಾ, ಗುರುಕುಲದಿಂದಲಾ: ಸಿಟಿ ರವಿ

Krishnaveni K
ಶನಿವಾರ, 31 ಮೇ 2025 (13:26 IST)
ಬೆಂಗಳೂರು: ಬಂಟ್ವಾಳದಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ಬಳಿಕ ಹಿಂದೂ ಸಂಘಟನೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಎಂಎಲ್ ಸಿ ಸಿಟಿ ರವಿ ಭಯೋತ್ಪಾದಕರು ಹುಟ್ಟುತ್ತಿರುವುದು ಮದರಸಾಗಳಿಂದಲಾ, ಗುರುಕುಲದಿಂದಲಾ ಎಂದು ಪ್ರಶ್ನೆ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ‘ಸುಹಾಸ್ ಶೆಟ್ಟಿ ಹತ್ಯೆಯಾದಾಗ ಅವನು ಗೂಂಡಾ ಎಂದರು. ಪರಮೇಶ್ ಹತ್ಯೆಯಾದಾಗ ತೇಲಿಸಿಬಿಟ್ಟರು. ಇನ್ನೊಂದು ಕೋಮಿನ ವ್ಯಕ್ತಿ ಹತ್ಯೆಯಾದಾಗ ಕಣ್ಣೀರು ಸುರಿಸುವ ಮನೋಭಾವ ಕಾಂಗ್ರೆಸ್ ಸರ್ಕಾರ ತೋರಿಸ್ತಿರೋದು ನಿಶ್ಚಳವಾಗಿ ಓಲೈಕೆ.

ಈಗ ಈ ನೆಪದಲ್ಲಿ ಹಿಂದೂ ಸಂಘಟನೆಗಳನ್ನು ಗುರಿ ಮಾಡಿಕೊಂಡು ತೊಂದರೆ ನೀಡಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ನಿಜವಾಗಿ ನಿಮಗೆ ಶಾಂತಿ ನೆಲೆಸಬೇಕು ಎಂಬ ಉದ್ದೇಶವಿದೆಯಾ?

ಅಸಷ್ಣುಹಿತೆ ಯಾವ ತತ್ವದಿಂದ ಹುಟ್ಟಿಕೊಳ್ಳುತ್ತಿದೆ? ಇದರ ಬಗ್ಗೆ ಒಂದು ವಿಮರ್ಶೆ ನಡೆಯಲಿದೆ. ಮತ ಗ್ರಂಥಗಳ ವಿಮರ್ಶೆ ನಡೆಯಲಿದೆ. ಆಗ ಗುರುಕುಲದಿಂದ ಭಯೋತ್ಪಾದಕರು ಹುಟ್ಟುತ್ತಾರೋ, ಮದರಸಾಗಳಿಂದ ಹುಟ್ಟುತ್ತಿದ್ದಾರೋ ಗೊತ್ತಾಗುತ್ತದೆ’ ಎಂದಿದ್ದಾರೆ.

‘ಯಾರಿಗೆ ಯಾವ ತತ್ವದ ಮೇಲೆ ನಂಬಿಕೆಯಿದೆ, ನಾನು ಸನಾತನ ಧರ್ಮದ ಮೇಲೆ ನಂಬಿಕೆಯಿಟ್ಟಿವನು. ನನ್ನ ಧರ್ಮದಲ್ಲಿ ಸ್ವರ್ಗಕ್ಕೆ ಹೋದರೆ ಪುಣ್ಯದ ಕೆಲಸ ಮಾಡಬೇಕು. ಎನ್ನುತ್ತದೆ. ಕೆಲವು ಧರ್ಮವು ಇನ್ನೊಬ್ಬರನ್ನು ಕೊಂದರೆ ಸ್ವರ್ಗಕ್ಕೆ ಹೋಗುತ್ತದೆ ಎನ್ನುತ್ತದೆ. ಇಂತಹವುಗಳ ಬಗ್ಗೆ ಸಂವಾದ ನಡೆಸಬೇಕಾದ ಅವಶ್ಯಕತೆಯಿದೆ. ಅಂತಹ ಮತಗ್ರಂಥಗಳನ್ನು ದೂರ ಇಡಬೇಕು. ಇಲ್ಲದೇ ಇದ್ದರೆ ಕೋಮುಗಲಭೆ ಹೇಗೆ ನಿಯಂತ್ರಣಕ್ಕೆ ಬರುತ್ತದೆ’ ಎಂದು ಸಿಟಿ ರವಿ ಪ್ರಶ್ನಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹರಿಯಾಣ ರಾಜ್ಯದಲ್ಲಿ ಒಂದೇ ದಿನದಲ್ಲಿ 257 ಆರೋಪಿಗಳ ಬಂಧನ

100 ವರ್ಷಗಳ ಬಳಿಕ ಆರ್‌ಎಸ್‌ಎಸ್ ಕಾನೂನು ಪಾಲಿಸಿದೆ: ಪ್ರಿಯಾಂಕ್ ಖರ್ಗೆ

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ, ಎಸ್‌ಐಟಿ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆದ ಆರ್‌ಎಸ್‌ಎಸ್‌ ಪಥಸಂಚಲನ

ಇನ್ನೇನು ಮದುವೆಗೆ ಒಂದು ಗಂಟೆಯಿರುವಾಗ ವಧುವನ್ನೇ ಕೊಂದ ವರ, ಕಾರಣ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments