Select Your Language

Notifications

webdunia
webdunia
webdunia
webdunia

ಮಾಧ್ಯಮಗಳಲ್ಲಿ ಪ್ರಚಾರ ನೀಡುವ ಬದಲು ಅದೇ ಹಣದಲ್ಲಿ ತಾಯಂದಿರಿಗೆ ಗೃಹಲಕ್ಷ್ಮಿ ಬಾಕಿ ಕೊಡಬಹುದಿತ್ತಲ್ವ: ಸಿಟಿ ರವಿ

DK Shivkumar
ಬೆಂಗಳೂರು: ಗೃಹಲಕ್ಷ್ಮಿಗೆ 3 ವರ್ಷ ಎಂದು ಎಲ್ಲ ಪತ್ರಿಕೆ, ಟಿವಿ, ಸಾರ್ವಜನಿಕ ಸ್ಥಳಗಳಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ಕೊಡಿಸಿದಿರಲ್ಲ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರೇ, ಆ ಹಣದಲ್ಲೇ ತಾಯಂದಿರಿಗೆ ಗೃಹಲಕ್ಷ್ಮಿ ಬಾಕಿಯನ್ನು ಕೊಡಬಹುದಿತ್ತಲ್ಲ ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ. 

ಈ ಸಂಬಂಧ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 

ಗೃಹಲಕ್ಷ್ಮಿಗೆ 3 ವರ್ಷ ಎಂದು ಎಲ್ಲ ಪತ್ರಿಕೆ, ಟಿವಿ, ಸಾರ್ವಜನಿಕ ಸ್ಥಳಗಳಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಾಹೀರಾತು ಕೊಡಿಸಿದಿರಲ್ಲ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌  ಅವರೇ, ಆ ಹಣದಲ್ಲೇ ತಾಯಂದಿರಿಗೆ ಗೃಹಲಕ್ಷ್ಮಿ ಬಾಕಿಯನ್ನು
ಕೊಡಬಹುದಿತ್ತಲ್ಲ?

ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಪಾವತಿಯಾಗಿಲ್ಲ. ಚುನಾವಣೆ ಬಂದಾಗ ಮಾತ್ರ ಸರ್ಕಾರಕ್ಕೆ ಗೃಹಲಕ್ಷ್ಮಿ ನೆನಪಾಗುತ್ತದೆ. ಮೂರು ತಿಂಗಳ ಬಾಕಿ ಹಣ ಎಲ್ಲಿ ಹೋಯಿತು? ಅದರ ಲೆಕ್ಕವನ್ನು ಪಾರದರ್ಶಕವಾಗಿ ಸರ್ಕಾರ ಜನರ ಮುಂದೆ ಇಡಲೇಬೇಕು.

ಗೃಹಲಕ್ಷ್ಮಿ ಯೋಜನೆಗೆ ಹಣವನ್ನೇ ಪಾವತಿಸದ ಮೇಲೆ ಅದರ ಜಾಹೀರಾತು ಹಾಕಿ ಸಂಭ್ರಮಿಸುವುದಾದರೂ ಏಕೆ? ಗೃಹಲಕ್ಷ್ಮಿ ಹೆಸರಿನಲ್ಲಿ ಮಹಿಳೆಯರಿಗೆ ಮೋಸ ಮಾಡಲು ನೋಡಬೇಡಿ. ಮೊದಲು ಬಾಕಿ ಇರುವ 3 ತಿಂಗಳ ಮೊತ್ತವನ್ನು ಬಿಡುಗಡೆಗೊಳಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಸರ್ಕಾರಕ್ಕೆ 100 ದಿನದ ಸಂಭ್ರಮ: ನಾಳೆ ಗುಡ್ ನ್ಯೂಸ್ ಗ್ಯಾರಂಟಿ