Select Your Language

Notifications

webdunia
webdunia
webdunia
webdunia

ನಕಲಿ ರೇಪ್ ಕೇಸ್ ಹಾಕ್ತಿನಿ ಅಂದ ನಟಿ ಅರೆಸ್ಟ್

ಅಪರಾಧ ಸುದ್ದಿ
ನವದೆಹಲಿ , ಭಾನುವಾರ, 16 ಜುಲೈ 2017 (14:55 IST)
ವ್ಯಕ್ತಿಯೊಬ್ಬನಿಗೆ ಸುಳ್ಳು ರೇಪ್ ಕೇಸ್ ಹಾಕುವುದಾಗಿ ಬೆದರಿಸಿ ಹಣ ಪಡೆದು ವಂಚಿಸಿದ ಪುಣೆ ಮೂಲದ ನಟಿ ರೂಜಾ ಜಾಧವ್‌ರನ್ನು ಪೊಲೀಸರು ಬಂಧಿಸಿದ್ದಾರೆ.
 
ಹಣ ಪಡೆದು ಲೈಂಗಿಕ ಸುಖ ನೀಡುವುದಾಗಿ ಆಮಿಷವೊಡ್ಡೊತ್ತಿದ್ದ ನಟಿ ಜಾಧವ್, ನಂತರ ಅವರನ್ನು ಸುಲಿಗೆ ಮಾಡಿ ವಂಚಿಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
 ನಟಿ ಪೂಜಾ ಜಾಧವ್, ವ್ಯಕ್ತಿಯೊಬ್ಬನಿಗೆ 2 ಸಾವಿರ ರೂಪಾಯಿ ನೀಡಿದಲ್ಲಿ ಲೈಂಗಿಕ ಸುಖ ನೀಡುವುದಾಗಿ ತಿಳಿಸಿದ್ದಾಳೆ. ಎರಡು ಸಾವಿರ ರೂಪಾಯಿ ಪಾವತಿಸಿದ ಗ್ರಾಹಕ, ಆಕೆಯೊಂದಿಗೆ ಲಾಡ್ಜ್‌ನಲ್ಲಿ ಸುಖ ಅನುಭವಿಸಿದ. ನಂತರ ಆಕೆ 5 ಲಕ್ಷ ರೂಪಾಯಿ ನೀಡದಿದ್ದಲ್ಲಿ ರೇಪ್ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದಾಳೆ.   
 
ಹಣ ನೀಡಲು ಗ್ರಾಹಕ ವಿಫಲವಾದಾಗ ತನ್ನನ್ನು ವಿವಾಹವಾಗುವಂತೆ ಒತ್ತಾಯಿಸಿದ್ದಾಳೆ. ಒತ್ತಡದಿಂದಾಗಿ ವಿವಾಹವಾಗಲು ಒಪ್ಪಿದ್ದಾನೆ. ಇತನಿಂದ ಹಣ ದೊರೆಯುವುದಿಲ್ಲ ಎಂದು ಅರಿತ ಪೂಜಾ ಜಾಧವ್ ಮತ್ತು ಆಕೆಯ ಗ್ಯಾಂಗ್ ಗ್ರಾಹಕನ ಮೇಲೆ ಹಲ್ಲೆ ಮಾಡಿದೆ
 
ಗ್ರಾಹಕ ನಂತರ, ಪೊಲೀಸ್ ಠಾಣೆಗೆ ತೆರಳಿ ನಟಿ ಪೂಜಾ ಜಾಧವ್ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದ್ದಾನೆ. ಪೊಲೀಸರು ನಟಿ ಪೂಜಾ ಜಾಧವ್ ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯೊಂದಿಗೆ ಗೆಳೆತನ ಬೆಳೆಸಿ ರೇಪ್‌ ಮಾಡಲು ಸ್ನೇಹಿತರನ್ನು ಕರೆದ ಕಾಮುಕ