Webdunia - Bharat's app for daily news and videos

Install App

ಬಡತನದಲ್ಲಿ ಅರಳಿದ ಹೂ

Webdunia
ಸೋಮವಾರ, 14 ಫೆಬ್ರವರಿ 2022 (14:04 IST)
ಎಲೆಕ್ಟ್ರಿಷಿಯನ್​ ತಂದೆ ಪುತ್ರನ ಕ್ರಿಕೆಟ್​ ಭವಿಷ್ಯದ ಕನಸಿಗೆ ಸೂಕ್ತ ಮಾರ್ಗದರ್ಶನ ನೀಡಲು ಬೇಕಾಗಿದ್ದ ಖರ್ಚನ್ನು ಭರಿಸಲು ವಿಫಲನಾಗಿದ್ದರೂ ಸಹ ಈಗ ಅದೇ ಪುತ್ರ ಕ್ರಿಕೆಟ್​ ಜೀವನದಲ್ಲಿ ತನ್ನ ಅಂಬೆಗಾಲಿಡಲು ಸಜ್ಜಾಗುತ್ತಿದ್ದಾರೆ.
 
ಹೈದರಾಬಾದ್​ನ ಚಂದ್ರಾಯನಗುಟ್ಟಾ ಪ್ರದೇಶದಲ್ಲಿ ಅತ್ಯದ್ಭುತವಾಗಿ ಕ್ರಿಕೆಟ್​ ಆಡುತ್ತಿದ್ದ 9 ವರ್ಷದ ಪುಟ್ಟ ಪೋರ ಇದೀಗ ತನ್ನ 19ನೇ ವರ್ಷ ವಯಸ್ಸಿನಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ 1.7 ಕೋಟಿ ರೂಪಾಯಿಗಳಿಗೆ ಹರಾಜಾಗಿದ್ದಾರೆ.
 
2022ನೇ ಸಾಲಿನ ಐಪಿಎಲ್​​ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್​ ತಂಡವು ಎನ್​ ತಿಲಕ್​ ವರ್ಮಾರನ್ನು 1.7 ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದೆ. ಕ್ರಿಕೆಟಿಗನಾಗಿ ತಿಲಕ್​ ರೂಪುಗೊಳ್ಳುವದರ ಹಿಂದೆ ಕೋಚ್​ ಸಲಾಮ್ ಬಯಾಶ್​​ರ ಶ್ರಮ ಬಹಳಷ್ಟಿದೆ.
ತಿಲಕ್​ಗೆ ಅಗತ್ಯವಿದ್ದ ಮಾರ್ಗದರ್ಶನ, ಆಹಾರ ಹಾಗೂ ಎಷ್ಟೋ ಸಂದರ್ಭಗಳಲ್ಲಿ ತನ್ನ ಐದು ಮಂದಿ ಕುಟುಂಬಸ್ಥರು ವಾಸಿಸುತ್ತಿದ್ದ ಸ್ವಂತ ಮನೆಯಲ್ಲಿ ತಿಲಕ್​​ಗೆ ಆಶ್ರಯ ನೀಡಿದ್ದರಂತೆ.
 
ತಿಲಕ್​ ತಂದೆ ನಂಬೂರಿ ನಾಗರಾಜರಿಗೆ ಅವರನ್ನು ಕ್ರಿಕೆಟ್​ ಅಕಾಡೆಮಿಗೆ ಸೇರಿಸುವಷ್ಟು ಹಣ ಇರಲಿಲ್ಲ. ಈ ಸಂದರ್ಭದಲ್ಲಿ ಸಲಾಮ್,​​ ತಿಲಕ್​ಗೆ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಿದ ತಿಲಕ್​ ವರ್ಮಾ, ನನ್ನ ಬಗ್ಗೆ ನೀವು ಏನನ್ನೇ ಬರೆಯದಿದ್ದರೂ ಅಡ್ಡಿಲ್ಲ, ಆದರೆ ನನ್ನ ಕೋಚ್​ ಸರ್​ ಬಗ್ಗೆ ನೀವು ಅವಶ್ಯವಾಗಿ ಬರಯಲೇಬೇಕು ಎಂದು ಮಾಧ್ಯಮಗಳ ಎದುರು ಹೇಳಿದ್ದರಂತೆ.
 
ಕ್ರಿಕೆಟ್​ಗೆ ಬೇಕಾದ ಎಲ್ಲಾ ವೆಚ್ಚಗಳನ್ನು ಸಲಾಮ್​ ಭಾಯಿ ನೋಡಿಕೊಂಡಿದ್ದಾರೆ. ನಾನು ಇಂದು ಈ ಹಂತಕ್ಕೆ ಬಂದಿದ್ದೇನೆ ಅಂದರೆ ಅದಕ್ಕೆ ಸಲಾಮ್​ ಹಾಗೂ ಅವರ ಕುಟುಂಬಸ್ಥರ ಬೆಂಬಲವೇ ಕಾರಣ ಎಂದು ತಿಲಕ್​ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments