ಬೆಂಗಳೂರು: ಇತ್ತೀಚೆಗೆ ರಾಜ್ಯ ಸರ್ಕಾರ ಪಟಾಕಿ ಹಚ್ಚುವ ವಿಚಾರದಲ್ಲಿ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿತ್ತು. ಆದರೆ ಇದೀಗ ದೀಪಾವಳಿ ಸಮಯಲ್ಲಿ ಆ ನಿಯಮಗಳೆಲ್ಲಾ ಲೆಕ್ಕಕ್ಕೇ ಇಲ್ಲದಂತಾಗಿದೆ.
ದೀಪಾವಳಿ ಆಗಲೀ ಯಾವುದೇ ವಿಶೇಷ ಸಂದರ್ಭಗಳಲ್ಲಾಗಲೀ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಹೊಡೆಯಲು ಅವಕಾಶ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಖಡಕ್ ಆಗಿ ಹೇಳಿತ್ತು. ಅಲ್ಲದೆ, ಹಸಿರು ಪಟಾಕಿ ಮಾತ್ರ ಹೊಡೆಯಬೇಕು ಎಂದು ನಿಯಮ ಮಾಡಿತ್ತು. ಆದರೆ ಅದೆಲ್ಲವೂ ಕೇವಲ ಕಾಗದದ ಮೇಲೆ ಮಾತ್ರ ಎಂಬಂತಾಗಿದೆ.
ದೀಪಾವಳಿ ಹಬ್ಬ ಶುರುವಾಗಿದ್ದು ಎಲ್ಲಾ ಕಡೆ ಹಗಲು-ರಾತ್ರಿ ಎಂಬ ಸಮಯ ಬೇಧವಿಲ್ಲದೇ ಪಟಾಕಿ ಸದ್ದು ಕೇಳುತ್ತಲೇ ಇದೆ. ಅಲ್ಲಿಗೆ ರಾಜ್ಯ ಸರ್ಕಾರ ನಿಯಮಕ್ಕೆ ಯಾವುದೇ ಬೆಲೆ ಇಲ್ಲ ಎಂಬಂತಾಗಿದೆ.