Select Your Language

Notifications

webdunia
webdunia
webdunia
webdunia

ಅಧ್ಯಕ್ಷ ಡಿಕೆ ಶಿವಕುಮಾರ್ ನ್ನ ಲೇವಡಿ ಮಾಡಿದ ಸಚಿವ ಸಿಪಿ ಯೋಗೀಶ್ವರ್

ಅಧ್ಯಕ್ಷ ಡಿಕೆ ಶಿವಕುಮಾರ್ ನ್ನ ಲೇವಡಿ ಮಾಡಿದ ಸಚಿವ ಸಿಪಿ ಯೋಗೀಶ್ವರ್
bangalore , ಗುರುವಾರ, 8 ಜುಲೈ 2021 (18:11 IST)
ನಮ್ಮ ಬಿಜೆಪಿ ಪಕ್ಷಕ್ಕೆ ಎಲ್ಲಿಂದಲ್ಲೋ ಬಂದವರನ್ನು ನಾವು ಸೇರಿಸಿಕೊಳ್ಳುವುದಿಲ್ಲ ಜೈಲಿಗೆ ಹೋದವರನ್ನು ನಾವು ಸೇರಿಸಿಕೊಳ್ಳುವುದಿಲ್ಲ ಅಂತಾ ಸಚಿವ ಸಿ.ಪಿ.ಯೋಗೀಶ್ವರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನ ಲೇವಡಿ ಮಾಡಿದ್ರು. ಬಿಡದಿಯ ಈಗಲ್ ಟನ್ ರೆಸಾರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ವಲಸೆ ಹೋಗಿರುವವರನ್ನ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಆಹ್ವಾನಿಸಿರುವ ಡಿಕೆಶಿಗೆ ಸಿಪಿವೈ ತಿರುಗೇಟು ನೀಡಿದ್ರು. ಇನ್ನೂ ಹೆಚ್.ಡಿ.ಕೆ ವಿರುದ್ದ ಮಾತನಾಡಿ ಕೆಆರ್‌ಎಸ್ ಸುತ್ತಲೂ ಕಲ್ಲುಗಣಿಗಾರಿಕೆ ಅನೇಕ ವರ್ಷಗಳಿಂದ ನಡೆಯುತ್ತಿದೆ, ಈ ಬಗ್ಗೆ ಮಂಡ್ಯ ಸಂಸದರಿಗೆ ಆತಂಕ ಇರಬೇಕು ಅವರು ತಮ್ಮ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ, ಈ ಬಗ್ಗೆ ಕುಮಾರಸ್ವಾಮಿ ಮಾತನಾಡಿರುವುದು ಸರಿ ಇಲ್ಲಾ ಅವರು ಈಗಾಗಲೇ ತಮ್ಮ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ, ಅವರ ಮಾತುಗಳು ತೂಕ ಕಳೆದುಕೊಂಡಿದೆ ಅವರ ರಾಜಕೀಯ ನೆಲೆ ದಿನೆದಿನೇ ಕಳೆದುಕೊಳ್ಳುತ್ತಿದೆ ನಾನು ಹೇಳಿಕೊಟ್ಟ ಮಾರನೆ ದಿನಕ್ಕೆ ಕುಮಾರಸ್ವಾಮಿ ಸಿಎಂ ಅವರನ್ನ ಭೇಟಿ ಮಾಡುತ್ತಾರೆ ಹೆಚ್‌ಡಿಕೆಗೆ ಹತಾಶೆ ಮನೋಭಾವಾ ಅಲ್ಲಿ ಅವರ ಮಗನನ್ನು ಸೋಲಿಸಿದ್ದಾರೆ ಉತ್ತರ ಕರ್ನಾಟದಕಲ್ಲಿ ಜಿಡಿಎಸ್  ನೆಲೆ ಇಲ್ಲ ಮಂಡ್ಯ ಬಿಡಲು ರೆಡಿ ಇಲ್ಲ ಹೀಗಾಗಿ ಏನೆನೋ ಮಾತನಾಡುತ್ತಿದ್ದಾರೆ ಅಂತಾ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ರು. ನನ್ನ ನಿಲುವನ್ನು ಆಗಾಗೆ ವ್ಯಕ್ತ ಪಡಿಸುತ್ತೇನೆ ಲೋಪಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದೇನೆ ಐದು ಭಾರಿ ನಾನು ಗೆಲುವು ಸಾಧಿಸಿದ್ದೇನೆ ರೇಣುಕಾಚಾರ್ಯ ರಾಜಕೀಯ ಕಾರ್ಯದರ್ಶಿಯಾಗಿದ್ದಾನೆ ಅವರಿಗೆ ಬೆಂಗಳೂರಿನಲ್ಲಿ ಐಷಾರಾಮಿ ಮನೆ ಸಿಕ್ಕಿದೆ ಎಂದರೆ ಅಲ್ಲಿ ನನ್ನ ಶ್ರಮವಿದೆ ಎಂದು ರೇಣುಕಾಚಾರ್ಯರನ್ನ ಕುಟುಕಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸಲಿಂಗ ಕಾಮಕ್ಕೆ ಕರೆದ ಯುವಕರಿಂದಲೇ ಶಿಕ್ಷಕನ ಹತ್ಯೆ!