Select Your Language

Notifications

webdunia
webdunia
webdunia
webdunia

ದೇಶಿಯ ಹಾಲಿನಲ್ಲಿ ಸಂತೃಪ್ತಿಯಿರುತ್ತದೆ; ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿ

ದೇಶಿಯ ಹಾಲಿನಲ್ಲಿ ಸಂತೃಪ್ತಿಯಿರುತ್ತದೆ; ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿ
ಬೆಂಗಳೂರು , ಸೋಮವಾರ, 22 ಆಗಸ್ಟ್ 2016 (20:47 IST)
ಹಾಲಿಗೆ ಹಾಲೇ ಪರ್ಯಾಯ, ಹೊರತು ಹಾಲಾಹಲವಲ್ಲ. ಸಂಕರ ತಳಿಯ ಹಸು 20 ಲೀಟರ್ ಕೊಡುತ್ತದೆ. ಆದರೆ, ಅದು ಆರೋಗ್ಯಕ್ಕೆ ಪೂರಕವಲ್ಲ. 20 ಲೀಟರ್ ವಿಷವನ್ನು ಕುಡಿಯುವುದಕ್ಕಿಂತ 2 ಲೀಟರ್ ಅಮೃತಸದೃಶವಾದ ದೇಶೀಯ ಹಾಲಿನಲ್ಲಿ ಸಂತೃಪ್ತಿ ಪಡುವುದೇ ಜಾಣತನ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.
 
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದ ಶ್ರೀಗಳು, ತಾಯಿಗೆ – ಗೋವಿಗೆ – ಹಾಲಿಗೆ ಪರ್ಯಾಯವಿಲ್ಲ. ಹಾಲಿಗಾಗಿ ಹೋರಾಟವನ್ನು ಮಾಡಿ, ಹಾಲಲ್ಲದ್ದನ್ನು ಸ್ವೀಕರಿಸಬೇಡಿ. ಭಾರತ ತಾಯಿಯ ಮಕ್ಕಳಾದ ನಮಗೆಲ್ಲರಿಗೂ ಶುದ್ಧ ಹಸುವಿನ ಹಾಲು ಕುಡಿಯುವ ಹಕ್ಕಿದೆ. ಸಾಮೂಹಿಕ ಬೇಡಿಕೆ ಎದ್ದಾಗ ಪೂರೈಸುವ ವ್ಯವಸ್ಥೆ ತಾನಾಗಿಯೇ ಬೆಳೆಯುತ್ತದೆ. ಶ್ರೀಮಠದ ಪ್ರೇರಣೆಯಿಂದ ಬೆಂಗಳೂರಿನ ಸುತ್ತಮುತ್ತ, ಜನರ ಹೆಸರಿನಲ್ಲಿ ಗೋವನ್ನು ಸಾಕುವ ಹಾಗು ಅದರ ಹಾಲನ್ನು ಪೂರೈಸುವ ವ್ಯವಸ್ಥೆ ರೂಪುಗೊಂಡಿದೆ. 
 
ಇಂತಹ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.ಹಾಲಿಲ್ಲದ ಬದುಕು ಜೀವವಿಲ್ಲದ ಬದುಕು ಎಂದು ಆಯುರ್ವೇದ ಹೇಳುತ್ತದೆ, ಹಾಲು ಜೀವದ್ರವ ಎಂದಿರುವ ಆಯುರ್ವೇದ, ಹಾಲನ್ನು ಔಷಧಗಳ ಸಾರ ಎಂದು ಕೊಂಡಾಡಿದೆ. ದೇಶೀಯ ಗೋವು ಸೂರ್ಯಕೇತು ನಾಡಿಯ ಮುಖಾಂತರ ಸೂರ್ಯಕಿರಣವನ್ನು ಹೀರಿಕೊಂಡು ಸತ್ವಯುತವಾದ ಹಾಲನ್ನು ನೀಡುತ್ತದೆ. ಆಧುನಿಕ ವಿಜ್ಞಾನವೂ ದೇಶೀಯ ಹಾಲಿನ ಗುಣವನ್ನು ಒಪ್ಪುತ್ತದೆ ಎಂದು ಸಂಶೋಧನೆಗಳ ಸಾರವನ್ನು ಶ್ರೀಗಳು ಉಲ್ಲೇಖಿಸಿದರು.
 
ಚಾತುರ್ಮಾಸ್ಯದ ಸೀಮೋಲ್ಲಂಘನದ ನಂತರ ಕರ್ನಾಟಕ ಸೇರಿದಂತೆ ಸಪ್ತರಾಜ್ಯಗಳಲ್ಲಿ ಗೋಕಿಂಕರ ಯಾತ್ರೆ ಹಾಗೂ ಮಂಗಲ ಗೋ ಯಾತ್ರೆ ನಡೆಯಲಿದೆ. ಗೋವಿನ ಈ ಮಹಾಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ಗೋಸಂರಕ್ಷಣಾ ಕಾರ್ಯದಲ್ಲಿ ಭಾಗಿಗಳಾಗಿ ಎಂದು ಜನತೆಗೆ ಕರೆನೀಡಿದರು.
 
ಅರಕಲಗೂಡು ವಿರಕ್ತಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಸಂತಸಂದೇಶ ನೀಡಿ, ಗೋಹತ್ಯೆಯನ್ನು ಬೆಂಬಲಿಸುವವರು, ತಮ್ಮ ಮಾತೆಯನ್ನು ಹತ್ಯೆಮಾಡಲು ಬೆಂಬಲಿಸುತ್ತಾರೆಯೇ ಎಂಬ ಅವಲೋಕನವನ್ನು ಮಾಡಿಕೊಳ್ಳಬೇಕು, ಸಂತರನ್ನು ತುಳಿಯುವ ಕೆಲಸವಾಗುತ್ತಿದ್ದು, ಎಲ್ಲಾ ಸಂತರು ಒಟ್ಟಗಬೇಕು ಎಂಬ ಕರೆಯನ್ನು ನೀಡಿದರು. ಅರಕಲುಗೂಡಿನ ತಮ್ಮ ಮಠದಲ್ಲೂ ಗೋಶಾಲೆಯನ್ನು ಸಧ್ಯದಲ್ಲಿಯೇ ಆರಂಭಿಸಲಿದ್ದು, ಆ ಗೋಶಾಲೆಗೆ ಪ್ರಥಮ ಗೋವನ್ನು ಶ್ರೀರಾಮಚಂದ್ರಾಪುರಮಠದಿಂದ ಅನುಗ್ರಹಿಸಬೇಕು ಎಂದು ನಿವೇದಿಸಿಕೊಂಡರು. ಮ.ನಿ.ಪ್ರ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು, ಜವೇನಹಳ್ಳಿ ಮಠ, ಹಾಸನ ಇವರು ಸಾನ್ನಿಧ್ಯವನ್ನು ಕರುಣಿಸಿದ್ದರು.
 
ಹೊರನಾಡಿನ ಧರ್ಮಕರ್ತರಾದ ಶ್ರೀಭೀಮೇಶ್ವರಜೋಷಿ ದಂಪತಿಗಳಿಗೆ ಹಾಗೂ ಬೆಂಗಳೂರು ನಗರದಲ್ಲಿ ದೇಶಿಯ ಹಸುವಿನ ಸಾಕಾಣೆಯಲ್ಲಿ ತೊಡಗಿಸಿಕೊಂಡಿರುವ ರಘು ಅವರುಗಳಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಗೋಸೇವಾ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಶ್ರೀಭೀಮೇಶ್ವರ ಜೋಷಿ ಅವರು, ಗೋವೂ ಕೂಡ ಅನ್ನಪೂರ್ಣೇಶ್ವರಿಯ ಒಂದು ಸ್ವರೂಪವಾಗಿದ್ದು, ಹೊರನಾಡಿನಲ್ಲಿ ಗೋಸಾಕಾಣೆ ಮಾಡಲಾಗುತ್ತಿದೆ ಎಂದರು. ಶ್ರೀಭಾರತೀಪ್ರಕಾಶನವು ಹೊರತಂದ ಗೋಕಥಾ ದೃಶ್ಯಮುದ್ರಿಕೆ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯಮುದ್ರಿಕೆಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿ ರಮೇಶ್ಚಂದ್ರ ಸಂಗಡಿಗರಿಂದ ಗಾಯನ ಕಾರ್ಯಕ್ರಮ ನಡೆಯಿತು.
 
ಮಂಗಳೂರು ಉತ್ತರ, ಉಡುಪಿ ಹಾಗೂ ಕಾರ್ಕಳ  ವಲಯದವರಿಂದ ಸರ್ವಸೇವೆ ನೆರವೆರಿತು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು. 
 
ಕೋಟ್ಸ್
 
ಹಾಲಿಗಾಗಿ ಹೋರಾಟವನ್ನು ಮಾಡಿ, ಹಾಲಲ್ಲದ್ದನ್ನು ಸ್ವೀಕರಿಸಬೇಡಿ. ಭಾರತ ತಾಯಿಯ ಮಕ್ಕಳಾದ ನಮಗೆಲ್ಲರಿಗೂ ಶುದ್ಧ ಹಸುವಿನ ಹಾಲು ಕುಡಿಯುವ ಹಕ್ಕಿದೆ. ಸಾಮೂಹಿಕ ಬೇಡಿಕೆ ಎದ್ದಾಗ ಪೂರೈಸುವ ವ್ಯವಸ್ಥೆ ತಾನಾಗಿಯೇ ಬೆಳೆಯುತ್ತದೆ
  - ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ
 
ಗೋಹತ್ಯೆಯನ್ನು ಬೆಂಬಲಿಸುವವರು, ತಮ್ಮ ಮಾತೆಯನ್ನು ಹತ್ಯೆಮಾಡಲು ಬೆಂಬಲಿಸುತ್ತಾರೆಯೇ ಎಂಬ ಅವಲೋಕನವನ್ನು ಮಾಡಿಕೊಳ್ಳಬೇಕು
                             - ಅರಕಲಗೂಡು ವಿರಕ್ತಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು
 
• ಹೊರನಾಡಿನ ಧರ್ಮಕರ್ತರಾದ ಶ್ರೀಭೀಮೇಶ್ವರಜೋಷಿ ದಂಪತಿಗಳಿಗೆ ಗೋಸೇವಾಪುರಸ್ಕಾರ ಪ್ರದಾನ.
• ಶ್ರೀಭಾರತೀಪ್ರಕಾಶನದ ಗೋಕಥಾ – ದೃಶ್ಯಮುದ್ರಿಕೆ ಲೋಕಾರ್ಪಣೆ.
• ಅರಕಲಗೂಡು ವಿರಕ್ತಮಠದ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಹಾಗೂ ಜವೇನಹಳ್ಳಿ ಮಠದ ಮ.ನಿ.ಪ್ರ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು ಗೋಸಂತ ಸಭೆಯಲ್ಲಿ ಭಾಗವಹಿಸಿದ್ದರು.
 
ಇಂದಿನ ಕಾರ್ಯಕ್ರಮ (23.08.2016):
 
ಬೆಳಗ್ಗೆ 7.00 : ಕಾಮಧೇನು ಹವನ
ಬೆಳಗ್ಗೆ 9.00: ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
ಅಪರಾಹ್ನ 3.00 : 
ಗೋಸಂದೇಶ : ಡಾ. ಕೆ. ಆರ್. ವಸಂತ ಕುಮಾರ್
ಲೋಕಾರ್ಪಣೆ : ವಿಚಾರವಿಹಾರ 3 : ಪುಸ್ತಕ : 
       ಸಾಧನಾಪಂಚಕ ಪ್ರವಚನಮಾಲಿಕೆ - ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು - ಡಾ. ಕೆ. ಆರ್. ವಸಂತ ಕುಮಾರ್,  ಎಲ್. ಡಿ. ನಂದೀಶ, ನಾಳಿನಕೆರೆ - ಮಂಡ್ಯ
ಸಂತ ಸಂದೇಶ : ಪರಮಪೂಜ್ಯ ಶ್ರೀ ಶ್ರೀ ಗುರುಪಾದ ದೇವರು, ಗುಲಗಂಜಿ ಮಠ,   ರೋಣ, ಗದಗ 
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ : ಹಿಂದೂಸ್ತಾನಿ ಗಾಯನ - ಪಂಡಿತ ಪರಮೇಶ್ವರ ಹೆಗಡೆ
ತಬಲ: ಪ್ರಕಾಶ ದೇಶಪಾಂಡೆ, ಹಾರ್ಮೋನಿಯಂ: ಹರೀಶ ಕರ್ಣಮ್
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ 'ಸಾಧನಾಪಂಚಕ' ಪ್ರವಚನ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಭೂ ವಿವಾದದಲ್ಲಿ ಡಿಜಿಪಿ ಓಂಪ್ರಕಾಶ್ ಪುತ್ರ ಕಾರ್ತಿಕೇಶ್?