Webdunia - Bharat's app for daily news and videos

Install App

ಕೋರ್ಟ್ ಸೀಲ್ ಕೂಡ ನಕಲಿ ಮಾಡಿದ ಖಾತರ್ನಾಕ್ ಜೋಡಿ

Webdunia
ಶುಕ್ರವಾರ, 26 ನವೆಂಬರ್ 2021 (19:02 IST)

ಹೈಕೋರ್ಟ್ ಆದೇಶದಂತೆ ಎಸ್​ಐಟಿ ರಚನೆ ಮಾಡಿದ್ದ ಪೂರ್ವ ವಿಭಾಗದ ಪೊಲೀಸರು, ನವೆಂಬರ್ 19 ರಂದು ನಕಲಿ ಛಾಪಾ ಕಾಗದ ಮಾರಾಟ ಮಾಡುತ್ತಿದ್ದ ಗುಂಪನ್ನು ಬಂಧಿಸಿದ್ದಾರೆ. ಈ ವೇಳೆ ಛಾಪ ಕಾಗದ ಅಷ್ಟೇ ಅಲ್ಲ ನ್ಯಾಯಾಲಯದ ಸೀಲ್​ಗಳನ್ನೇ ನಕಲು ಮಾಡಿರುವುದು ಬೆಳಕಿಗೆ ಬಂದಿದೆ. ಜಮೀನೊಂದರ ಜಡ್ಜ್ ಮೆಂಟ್ ಅನ್ನು ನಕಲು ಮಾಡಿ ಮಾರಾಟ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿಗಳು ತಮಗೆ ಬೇಕಾದವರ ಹೆಸರಿಗೆ ತೀರ್ಪು ಬರೆದು ನ್ಯಾಯಾಲಯದ ಸೀಲ್‌ ನಕಲು ಮಾಡಿದ್ದಾರೆ. ತನಿಖೆಯಲ್ಲಿ ಈ ನಕಲಿ ಸೀಲ್ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಕೋಲಾರ‌ ಮತ್ತು ಬೆಂಗಳೂರು ಹೊರವಲಯದ ಸಬ್ ರಿಜಿಸ್ಟಾರ್​ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಕಾಲ್ ಲಿಸ್ಟ್​ನಲ್ಲಿ ಕೋಲಾರದ ಸಬ್ ರಿಜಿಸ್ಟಾರ್​ನ ಬ್ರೋಕರ್ ಜೊತೆ ಹುಸೇನ್ ನಿರಂತರ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ.

ಸದ್ಯ ಬೆಂಗಳೂರು ಹೊರವಲಯದ ಸಬ್ ರಿಜಿಸ್ಟರ್​ನ ಹಲವು ಬ್ರೋಕರ್​ಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹುಸೇನ್ ನಕಲಿ ಛಾಪಾ ಕಾಗದ ಕೋಲಾರ ಸಬ್ ರಿಜಿಸ್ಟರ್​ನಲ್ಲಿ ಬಳಕೆ ಮಾಡಲಾಗಿದೆ. ಅಲ್ಲದೇ ಸೂಕ್ತ ಮಾಹಿತಿ, ಬ್ರೋಕರ್​ಗಳ ವಿಚಾರಣೆ ಬಳಿಕ ಹಲವರ ಬಂಧನವಾಗುವ ಸಾಧ್ಯತೆ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments