Publish Date: Wed, 03 Feb 2021 (06:38 IST)
Updated Date: Wed, 03 Feb 2021 (06:40 IST)
ಮುಂಬೈ : ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ 58 ವರ್ಷದ ವ್ಯಕ್ತಿಗೆ ಕೋರ್ಟ್ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಕೋಳಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಮನೆಯ ಹೊರಗೆ ಆಟವಾಡುತ್ತಿದ್ದ ಹುಡುಗನನ್ನು ಕರೆದು 2ರೂ, ನೀಡಿ ತನ್ನ ಮನೆಗೆ ಕರೆದೊಯ್ದು ಆತನನ್ನು ವಿವಸ್ತ್ರಗೊಳಿಸಿ ಅವನ ಜನನಾಂಗವನ್ನು ಸ್ಪರ್ಶಿಸಿದ್ದಲ್ಲದೇ ಅವನ ಮೇಲೆ ಹಸ್ತಮೈಥುನ ಮಾಡಿಕೊಂಡನು. ಈ ಬಗ್ಗೆ ಹುಡುಗ ತಾಯಿ ಬಳಿ ತಿಳಿಸಿದ ಹಿನ್ನಲೆಯಲ್ಲಿ ತಾಯಿ ಪ್ರಕರಣ ದಾಖಲಿಸಿದ್ದಾಳೆ. ಈ ಹಿನ್ನಲೆಯಲ್ಲಿ ಆತನಿಗೆ ಕೋರ್ಟ್ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.