Daily Horoscope
✕

ಕೊರೋನಾ ವೈರಸ್ : 13 ಜನ ಆಸ್ಪತ್ರೆಯಿಂದ ಬಿಡುಗಡೆ

Webdunia
ಭಾನುವಾರ, 10 ಮೇ 2020 (23:05 IST)
ಕೊರೊನಾ ಸೋಂಕಿನಿಂದ ಗುಣಮುಖರಾದ 13 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

‌ ಕಲಬುರಗಿ ನಗರದ 12 ಮತ್ತು ಆಳಂದ ಪಟ್ಟಣದ 65 ವರ್ಷದ ವೃದ್ಧೆ ಸೇರಿದಂತೆ ಒಟ್ಟು 13 ಜನ ಕೋವಿಡ್-19 ಪೀಡಿತರು ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ‌ ಸೋಂಕು ಪತ್ತೆಯಾದ ನಂತರ‌ ಪ್ರಥಮ ಬಾರಿಗೆ ಒಂದೇ‌ ದಿನ‌ ಇಷ್ಟೊಂದು ಗರಿಷ್ಠ ಪ್ರಮಾಣದಲ್ಲಿ ರೋಗಿಗಳು ಗುಣಮುಖರಾಗಿ‌ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ‌‌ ಪಟ್ಟಣದ 65 ವರ್ಷದ ವೃದ್ಧೆ (ರೋಗಿ ಸಂಖ್ಯೆ-502),ಕಲಬುರಗಿ ನಗರದ ಖಮರ್‌ ಕಾಲೋನಿಯ 7 ವರ್ಷದ ಬಾಲಕ‌(ರೋಗಿ ಸಂಖ್ಯೆ-503) ಮತ್ತು 40 ವರ್ಷದ ಯುವತಿ (ರೋಗಿ ಸಂಖ್ಯೆ-517) ಹಾಗೂ ಇಸ್ಲಾಮಾಬಾದ‌ ಕಾಲೋನಿಯ 43 ವರ್ಷದ ಪುರುಷ (ರೋಗಿ ಸಂಖ್ಯೆ-517) ಮತ್ತು 28 ವರ್ಷದ ಯುವತಿ (ರೋಗಿ ಸಂಖ್ಯೆ-518) ಗುಣಮುಖರಾಗಿದ್ದಾರೆ.

ಅದೇ‌ ರೀತಿ ಕಲಬುರಗಿಯ ಮೋಮಿನಪುರ ಪ್ರದೇಶದ 45 ವರ್ಷದ ಯುವತಿ (ರೋಗಿ ಸಂಖ್ಯೆ-519), 22 ವರ್ಷದ ಯುವತಿ (ರೋಗಿ ಸಂಖ್ಯೆ-520), 28 ವರ್ಷದ ಯುವಕ (ರೋಗಿ ಸಂಖ್ಯೆ-526), 14 ವರ್ಷದ ಬಾಲಕಿ (ರೋಗಿ ಸಂಖ್ಯೆ-527), 22 ವರ್ಷದ ಯುವಕ (ರೋಗಿ ಸಂಖ್ಯೆ-528), 20 ವರ್ಷದ ಯುವತಿ (ರೋಗಿ ಸಂಖ್ಯೆ-530), 17 ವರ್ಷದ ಬಾಲಕಿ (ರೋಗಿ ಸಂಖ್ಯೆ-531) ಹಾಗೂ 12 ವರ್ಷದ  ಬಾಲಕಿ (ರೋಗಿ ಸಂಖ್ಯೆ-532) ಕೊರೋನಾ ಸೋಂಕಿನ ವಿರುದ್ಧ ಹೋರಾಡಿ ಚೇತರಿಕೆ ಕಂಡವರಾಗಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಕೊರೋನಾ‌ ಪೀಡಿತ 71 ರೋಗಿಗಳಲ್ಲಿ 44 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. 6 ಜನ ನಿಧನ‌ರಾಗಿದ್ದು, ಉಳಿದಂತೆ 21 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

174 ಜನರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್‌ಗೆ ಇಸ್ರೇಲ್‌ನಿಂದ ಉನ್ನತ ಗೌರವ

ಫಾರಂ-7 ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಕೇತನ್ ಅಗರ್ವಾಲ್ ಮರ್ಡರ್ ಕೇಸ್ ಗೆ ಟ್ವಿಸ್ಟ್: ದೋಷಾರೋಪಪಟ್ಟಿಯಲ್ಲಿ ಬೆಚ್ಚಿ ಬೀಳಿಸುವ ಅಂಶ ಬಯಲು

ಎಲ್ಲರೆದುರೇ ಬ್ಯಾಂಕ್ ನಲ್ಲೇ ಮಹಿಳೆಯ ಲಕ್ಷ ಹಣ, ಪಾಸ್ ಬುಕ್ ಎಗರಿಸಿದ ಖತರ್ನಾಕ್ ಖದೀಮ: video

ಹರಿದ್ವಾರ ಹೆದ್ದಾರಿಯಲ್ಲಿ ಮಹಿಳೆಯರ ಕಾರು ಚೇಸ್ ಮಾಡಿ ಅಸಭ್ಯ ವರ್ತನೆ: Video

ಮುಂದಿನ ಸುದ್ದಿ
Show comments