Select Your Language

Notifications

webdunia
webdunia
webdunia
webdunia

ಶ್ರೀರಂಗಪಟ್ಟಣಕ್ಕೆ ಕೊರೊನಾತಂಕ – ಓಂ ಶಕ್ತಿ ದೇಗುಲಕ್ಕೆ ಹೋಗಿ ಬಂದ 30 ಮಂದಿಗೆ ಪಾಸಿಟಿವ್

webdunia
ಶ್ರೀರಂಗಪಟ್ಟಣ , ಮಂಗಳವಾರ, 4 ಜನವರಿ 2022 (18:26 IST)
ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಈ ಮೂಲಕ ಮತ್ತೆ ಜಿಲ್ಲೆಯನ್ನು ವೈರಸ್ ಕಾಡುತ್ತಿದೆ.
ತಮಿಳುನಾಡು ಪ್ರವಾಸ ಕೈಗೊಂಡಿದ್ದವರಲ್ಲಿ ಸೋಂಕು ಪತ್ತೆಯಾಗಿದೆ. ಓಂ ಶಕ್ತಿ ದೇವಾಲಯಕ್ಕೆ ಹೋಗಿ ಬಂದಿದ್ದ 30ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಶ್ರೀರಂಗಪಟ್ಟಣ ತಾಲೂಕಿನ ಹಳ್ಳಿಗಳಿಂದ ಜನ ದೇವಾಲಯಕ್ಕೆ ತೆರಳಿದ್ದರು.
ಕಳೆದ ವಾರ 6 ಬಸ್‍ಗಳಲ್ಲಿ ದೇವಾಲಯಕ್ಕೆ ತೆರಳಿದ್ದರು. ಈವರೆಗೆ ವಾಪಾಸ್ಸಾದ 4 ಬಸ್‍ನಲ್ಲಿದ್ದ ಭಕ್ತರಲ್ಲಿ 30ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಇಂದು ಅಥವಾ ನಾಳೆ ಮತ್ತೆರಡು ಬಸ್ ಶ್ರೀರಂಗಪಟ್ಟಣಕ್ಕೆ ವಾಪಾಸ್ಸಾಗುವ ಸಾಧ್ಯತೆ ಇದೆ. ಆರೋಗ್ಯ ಸಿಬ್ಬಂದಿ ತಮಿಳುನಾಡಿನಿಂದ ವಾಪಸ್ಸಾದವರ ಟೆಸ್ಟ್ ಮಾಡುತ್ತಿದ್ದಾರೆ.
ಪಾಸಿಟಿವ್ ಬಂದವರು ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರಿಗೂ ಪರೀಕ್ಷೆ ನಡೆಸಲಾಗುತ್ತಿದೆ. ಕೊರೊನಾ ಪ್ರಕರಣಗಳು ಹೆಚ್ಚಳ ಹಿನ್ನೆಲೆ ಶ್ರೀರಂಗಪಟ್ಟಣದಲ್ಲಿ ಆತಂಕ ಮನೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಮಿಕ್ರಾನ್ ಸಾಮಾನ್ಯ ವೈರಲ್ ಜ್ವರ, ಜಾಗರೂಕತೆ, ಸುರಕ್ಷತೆ ಇದ್ದರೆ ಸಾಕು: ಸಿಎಂ ಯೋಗಿ ಆದಿತ್ಯನಾಥ್