Select Your Language

Notifications

webdunia
webdunia
webdunia
webdunia

ಹೃದಯಾಘಾತದಿಂದ ಕೊರಾನಾ ವಾರಿಯರ್ ಸಾವು; ಕುಟುಂಬದ ನೆರವಿಗೆ ಬಾರದ ಅಧಿಕಾರಿಗಳು

ಹೃದಯಾಘಾತದಿಂದ ಕೊರಾನಾ ವಾರಿಯರ್  ಸಾವು; ಕುಟುಂಬದ ನೆರವಿಗೆ ಬಾರದ ಅಧಿಕಾರಿಗಳು
ಗದಗ , ಸೋಮವಾರ, 1 ಜೂನ್ 2020 (10:07 IST)
Normal 0 false false false EN-US X-NONE X-NONE

ಗದಗ: ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿದ್ದ  ಕೊರೊನಾ ವಾರಿಯರ್ ಹೃದಯಘಾತದಿಂದ ಮೃತಪಟ್ಟಿದ್ದ . ಮೃತ ವ್ಯಕ್ತಿಯ ಕುಟುಂಬದ ನೆರವಿಗೆ ಯಾವ ಅಧಿಕಾರಿಗಳು ಕೂಡ ಬರಲಿಲ್ಲ.

 

ಆ್ಯಂಬುಲೆನ್ಸ್ ಚಾಲಕನಾಗಿದ್ದ ಕೊರೊನಾ ವಾರಿಯರ್ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಆತನ ಪತ್ನಿ ತಾಳಿಯನ್ನು ಅಡವಿಟ್ಟು ಪತಿಯ ಕಾರ್ಯ ಮಾಡಿದ್ದಳು. ಕೊರೊನಾ ವಾರಿಯರ್ ಮೃತಪಟ್ಟು 5 ದಿನಗಳಾಗಿವೆ. ಮೃತನ ಮನೆಗೆ ಸೌಜನ್ಯಕ್ಕೂ ಅಧಿಕಾರಿಗಳು ಭೇಟಿ ನೀಡಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಯಾರೂ ಭೇಟಿ ನೀಡಿಲ್ಲ. ಮೃತನ ಪತ್ನಿಗೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡಿಲ್ಲ.

ಗದಗ ಡಿಹೆಚ್ ಒ ಇದು ತನ್ನ ವ್ಯಾಪ್ತಿಗೆ ಬರಲ್ಲ ಎಂದು ಹೇಳಿದ್ದಾರೆ. ಡಿ ಹೆಚ್ ಒ ಬೇಜವಾಬ್ದಾರಿ ನಡೆಗೆ ಕುಟುಂಬಸ್ಥರು ಆಕ್ರೊಶ ವ್ಯಕ್ತಪಡಿಸಿದ್ದಾರೆ. ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಅನ್ ಲಾಕ್ ಘೋಷಣೆ ಮಾಡಲು ಇದೇ ಕಾರಣ