ಕೊರೊನಾ ಭೀತಿ : ಚಿಕನ್, ಮಟನ್ ಮಾರಾಟಗಾರರ ವಿರುದ್ಧ ಕೇಸ್

Webdunia
ಭಾನುವಾರ, 15 ಮಾರ್ಚ್ 2020 (15:38 IST)
ಚಿಕನ್, ಮಟನ್, ಮೀನು ಮಾರಾಟ ಮಾಡುತ್ತಿದ್ದವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

ಕೃಷ್ಣರಾಜಪೇಟೆ ಪುರಸಭೆಯ ವ್ಯಾಪ್ತಿಯಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮಾಂಸದಂಗಡಿಗಳು ಹಾಗೂ ಕೋಳಿ ಅಂಗಡಿಗಳನ್ನು ಬಂದ್ ಮಾಡಿಸಿ ತಾಲೂಕು ಆಡಳಿತವು ಆದೇಶ ಹೊರಡಿಸಿತ್ತು.

ಆದರೂ ಪಟ್ಟಣದ ಹೊರವಲಯದ ಮೈಸೂರು ರಸ್ತೆಯಲ್ಲಿರುವ  ಅಮೀನ್ ಮಟನ್ ಸ್ಟಾಲ್ ನಲ್ಲಿ ನಾಲ್ಕೈದು ಕುರಿಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿದರು. ಅಂಗಡಿಯ ಮಾಲೀಕ ಸೈಯ್ಯದ್ ಸಾಧಿಕ್ ವಿರುದ್ಧ ದೂರು ದಾಖಲಿಸಿದ್ದಾರೆ.

 ಮಾಂಸದಂಗಡಿಯ ಪಕ್ಕದಲ್ಲಿರುವ ಪಂಪ್ ಹೌಸ್ ನಲ್ಲಿ ಬಚ್ಚಿಟ್ಟಿದ್ದ ಮಾಂಸ, ಚರ್ಮ ಮತ್ತು ಕುರಿ ಆಡುಗಳ ತಲೆಗಳನ್ನು ಪತ್ತೆಮಾಡಿ ವಶಕ್ಕೆ ತೆಗೆದುಕೊಂಡರು. ಕೊರೋನಾ ವೈರಸ್ ನ ಭೀತಿಯ ಹಿನ್ನೆಲೆಯಲ್ಲಿ ಪುರಸಭೆ ಹಾಗೂ ತಾಲೂಕು ಆಡಳಿತವು ಸಕಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದೆ.

ಮಾಂಸದಂಗಡಿಗಳು, ಕೋಳಿ ಅಂಗಡಿಗಳು ಸೇರಿದಂತೆ ರಸ್ತೆ ಬದಿಯ ತಳ್ಳು ಗಾಡಿಗಳಲ್ಲಿ ಹಾಕುತ್ತಿದ್ದ ಪಾನಿಪುರಿ, ಗೋಬಿಮಂಚೂರಿ ಹಾಗೂ ಕ್ಯಾಂಟೀನ್ ಗಳನ್ನು ಬಂದ್ ಮಾಡಿಸಲಾಗಿದೆ.  



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಿವಿಕೆ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು, ಚುನಾವಣೆಗೆ ಸಿದ್ಧರಾಗಿ: ಕಾರ್ಯಕರ್ತರಿಗೆ ಸ್ಟಾಲಿನ್‌ ಕರೆ

ನಾಳೆ ಬಸ್‌ಗಳನ್ನು ರಸ್ತೆಗೆ ಇಳಿಸಲಿರಲು ನಿರ್ಧರಿಸಿದ್ದ ಸಾರಿಗೆ ನೌಕರರಿಗೆ ಬಿಗ್‌ಶಾಕ್‌ ನೀಡಿದ ಹೈಕೋರ್ಟ್

ಗ್ಯಾರಂಟಿಗಳನ್ನು ಕೇವಲ ಚುನಾವಣಾ ತಂತ್ರಗಾರಿಕೆಗೆ ಬಳಸುವ ಕೆಲಸ ಮಾಡ್ತಿದೆ ಕಾಂಗ್ರೆಸ್: ವಿಜಯೇಂದ್ರ

ದುಬಾರೆ ಆನೆ ಶಿಬಿರದಲ್ಲಿ ಘೋರ ದುರಂತ: ಕಂಜನ್ ದಾಳಿಗೆ ಸಿಲುಕಿ ಮಾರ್ತಾಂಡ ಆನೆ ಸಾವು

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments