Select Your Language

Notifications

webdunia
webdunia
webdunia
webdunia

ಕೊರೊನಾ ಸೋಂಕಿತರು ಎಸ್ಕೇಪ್ ಆಗುತ್ತಿದ್ದಾರೆ- ಸಚಿವ ಅಶೋಕ್ ರಿಂದ ಸ್ಫೋಟಕ ಹೇಳಿಕೆ

ಕೊರೊನಾ ಸೋಂಕಿತರು ಎಸ್ಕೇಪ್ ಆಗುತ್ತಿದ್ದಾರೆ- ಸಚಿವ ಅಶೋಕ್ ರಿಂದ ಸ್ಫೋಟಕ ಹೇಳಿಕೆ
ಬೆಂಗಳೂರು , ಬುಧವಾರ, 28 ಏಪ್ರಿಲ್ 2021 (12:06 IST)
ಬೆಂಗಳೂರು : ಕೊರೊನಾ ಸೋಂಕಿತರು ಎಸ್ಕೇಪ್ ಆಗುತ್ತಿದ್ದಾರೆ ಎಂದು ಸಚಿವ ಅಶೋಕ್ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, 3ರಿಂದ 4 ಸಾವಿರ ಸೋಂಕಿತರು ನಾಪತ್ತೆಯಾಗಿದ್ದಾರೆ. ಕೆಲವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಕೆಲ ಸೋಂಕಿತರು ಮನೆ ಖಾಲಿ ಮಾಡಿದ್ದಾರೆ. ಇಂಥ ಸೋಂಕಿತರನ್ನು ಹುಡುಕುವುದು ಕಷ್ಟ. ಸೋಂಕಿತರನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. 

ಸೋಂಕಿತರ ನಿರ್ಲಕ್ಷ್ಯವೇ ಸೋಂಕು ಏರಿಕೆಗೆ ಕಾರಣ. ಪಾಸಿಟಿವ್ ಬಂದ್ರೆ ಸ್ವಿಚ್ ಆಫ್ ಮಾಡ್ಕೊಳ್ತಾರೆ. ಕೊರೊನಾ  ಹೆಚ್ಚಾದ್ಮೇಲೆ ಪರದಾಡುತ್ತಾರೆ. ಇದೇ ಕಾರಣಕ್ಕೆ ಬೆಡ್ ಗಳಿಗೆ ಸಂಕಷ್ಟ ಶುರುವಾಗಿರೋದು ಎಂದು ಸಚಿವರು ಕಿಡಿಕಾರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಾರ್ಗಸೂಚಿ ಪಾಲಿಸಿ ಸರ್ಕಾರದೊಂದಿಗೆ ಸಹಕರಿಸಿ ಸಿಎಂ ಬಿಎಸ್ ಯಡಿಯೂರಪ್ಪ ಮನವಿ